ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ , ಶ್ರೀಭಗವಾನ್ ಸತ್ಯ ಸಾಯಿ ಬಾಬಾ ರವರ ಆಶೀರ್ವಾದದಿಂದ ಇಷ್ಟಲ್ಲಾ ಅಭಿವೃದ್ದಿ ಕೆಲಸಗಳು ಮಾಡಲು ನನ್ನಿಂದ ಸಾಧ್ಯ ಎಂದು ಮಾಜಿ ಸ್ವೀಕರ್ ಹಾಲಿ ಶಾಸಕ ಕೆ. ಆರ್. ರಮೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ರಾಯಲ್ಪಾಡು ಹೋಬಳಿ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ವಿನೂತನವಾಗಿ ಪ್ಯಾರಾ ಗ್ಲೈಡರ್ ಮುಖಾಂತರ ಬಿತ್ತನೆ ಬೀಜ ಹಾಗೂ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಆರ್. ರಮೇಶ್ ಕುಮಾರ್ ಈಗ ಹಾಕುತ್ತಿರುವ ಬಿತ್ತನೆ ಬೀಜಕ್ಕೆ ಗೊಬ್ಬರ, ನೀರು, ಹಾಕುವಂತಿಲ್ಲ ಪ್ರಕೃತಿಯಿಂದ ಬರುವ ಮಳೆಯಿಂದಾಗಿ ಗಿಡಗಳು ಬೆಳೆಯುತ್ತವೆ. ಪರಿಸರ ಅಚ್ಚು ಹಸಿರಾಗಿ ಕಾಣುತ್ತವೆ. ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಇತ್ತು ಪ್ರಾಣಿ ಪಕ್ಷಿಗಳಿಗೂ ಸಹ ನೀರು ಸಿಗದಂತಾಗಿತ್ತು. ಈಗ ದೇವರ ದಯದಿಂದ ಉತ್ತಮ ಮಳೆಯಾಗುತ್ತದೆ. ಮಳೆಗಾಲದ ಕಾರಣದಿಂದ ಈ ಬಿತ್ತನೆ ಬೀಜಗಳ ಕಾರ್ಯ ಮಾಡುತ್ತಿದ್ದೇವೆ. ಇಷ್ಟಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡಲು ನನಗೆ ಸಾಯಿ ಬಾಬಾ ಅಶೀರ್ವಾದಿಂದ ಈ ತಾಲ್ಲೂಕಿನಲ್ಲಿ ಅಭಿವೃದ್ದಿ ಕಾರ್ಯಕ್ರಮಗಳು ಮಾಡುತ್ತಿದ್ದೇನೆ ಎಂದರು.
ಅಂದ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ದಿವಂಗತ ಎನ್.ಟಿ ರಾಮರಾವ್ ರವರು ತಿರುಪತಿ ಬೆಟ್ಟದಲ್ಲಿ ಕೂದಲು ಕೊಟ್ಟು ಬರುವಾಗ ಅವರಿಗೆ ಅಲೋಚನೆ ಬಂತು ಈ ಬೆಟ್ಟದಲ್ಲಿ ಯಾಕೆ ನಾವು ಬಿತ್ತನೆ ಬೀಜ ಮಾಡಬಾರದು ಎಂದು ತಿಳಿದು ಆಗ ಬಿತ್ತನೆ ಬೀಜ ಕಾರ್ಯಮಾಡಿದರು ಈಗ ತಿರುಪತಿಯ ಬೆಟ್ಟಗುಡ್ಡಗಳಲ್ಲಿ ಅಚ್ಚು ಹಸಿರಾಗಿ ಗಿಡಮರಗಳು ಬೆಳದಿದೆ. ಮಹಾನುಭಾವ ಮಾಡಿರುವ ಕಾರ್ಯವೇ ಇಂದು ನನಗೆ ಸ್ಪೂತಿಯಾಗಿದೆ. ಈಗಾಗಿ ಬಿತ್ತನೆ ಬೀಜ ಕಾರ್ಯ ಮಾಡುತ್ತಿದ್ದೇವೆ ಎಂದರು.
ನನ್ನ ಆಸೆಗಳು ಬೆಟ್ಟ ದಷ್ಟು ಇದೆ ಅವಕಾಶ ಸಿಕ್ಕಿದಾಗ ನನ್ನ ಕನಸುನ್ನು ನೆನಸು ಮಾಡಲು ಕೆಲಸ ಮಾಡುತ್ತಿದ್ದೇನೆ ಈ ತಾಲ್ಲೂಕಿನ ಜನರು ಬಹಳ ಹೃದಯವಂತರು. ನಾವು ಮಾಡುವ ಕೆಲಸಗಳಿಂದ ನಾವು ಮಾತನಾಡುವ ಭಾಷೆಯಿಂದ ಜನರು ನಮ್ಮ ಪ್ರೀತಿ ವಿಶ್ವಾಸವನ್ನುಗಳಿಸಬಹುದು ಈ ಒಂದು ಕಾರ್ಯಕ್ರಮಕ್ಕೆ ಬಿಳಿ ಪಂಚೆ, ಟವಲ್ ಹಾಕಿಕೊಂಡು ಬಂದಿರುವ ಉದ್ದೇಶ ನಮ್ಮ ಹಿಂದು ಸಂಪ್ರದಾಯ ಪ್ರಕಾರ ಯಾವುದೊಂದು ಶುಭ ಕಾರ್ಯವನ್ನು ಮಾಡಿದಾಗ ಬಿಳಿ ವಸ್ತ್ರವನ್ನು ಧರಿಸುವುದು ಶುಭ ಸೂಚನೆ ಎಂದ ಇವರು ನಮ್ಮದು ಪ್ರಾಕೃತಿಕವಾಗಿ ಸಂಪದ್ಭರಿತ ದೇಶ ಬ್ರಿಟಿಷರ್ ಕಾಲದಿಂದಲೂ ನಮ್ಮ ಪ್ರಾಕೃತಿಕ ಸಂಪತ್ನ್ನು ದರಾಳವಾಗಿ ಉಪಯೋಗಿಸಲಾಗುತ್ತಿದ್ದು, ಹೇರಳವಾದ ಈ ಸಂಪತ್ ಒಂದು ಕಾಲಕ್ಕೆ ಮುಗಿಯದ ಅಕ್ಷಯ ಪಾತ್ರೆಯಂತೆ ಇತ್ತು ಇಂತಹ ಅಕ್ಷಯ ಭಂಡಾರ ಕ್ಷಯವಾಗದಂತೆ ಮುಂದಿನ ಪೀಳಿಗೆಗೆ ಇದನ್ನು ಉಳಿಸುವ,ಬೆಳಸುವ ಕಾರ್ಯವನ್ನು ನಾವು ನೀವು ಎಲ್ಲರೂ ಮಾಡಬೇಕು. ಮರ ಗಿಡ, ಗಿಡಮೂಳಕೆ ಉಳಿದರೆ ಪ್ರಕೃತಿ ಸಮತೋಲನವಾಗಿ ಜೀವ ಜಗತ್ತೂ ಕೂಡಾ ನೆಮ್ಮದಿಯ ಬದಕು ಕಾಣಲು ಸಾಧ್ಯ ಈ ಭೂಮಿ, ಪರಿಸರ ನಮಗಾಗಿ ಅಲ್ಲ, ಮುಂದಿನ ಪೀಳಿಗೆಗಾಗಿ ಎಂದರು.
ಜೀವನ ಪರ್ಯಾಂತ ನೆನಸಿಕೊಳ್ಳುವ ಕೆಲಸಗಳು ಮಾಡುವ ಉದ್ದೇಶ ನನಗೆ ಇದೆ ಕಷ್ಟದಲ್ಲಿ ನೆರವಾಗಿದ್ದವರನ್ನು ನೆನಸಿಕೊಳ್ಳಬೇಕು ನನ್ನ 50 ವರ್ಷಗಳ ಸಾರ್ವಜನಿಕ ಜೀವನ 45 ವರ್ಷಗಳ ಸಂಸದೀಯ ಜೀವನ ನೋಡಿದ್ದೇನೆ. ಈ ತಾಲ್ಲೂಕಿನ ಜನರು ನನಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ನಾನು ನನ್ನ ಜೀವನ ಇರುವವರಿಗೂ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ವಲಯ ಅರಣ್ಯಾಧಿಕಾರಿ ಸುರೇಶ್ಬಾಬು ಮಾತನಾಡಿ ಈ ತಾಲ್ಲೂಕಿನಲ್ಲಿ ಒಟ್ಟು 43 ಸಾವಿರ ಎಕರೆ ಅರಣ್ಯ ಪ್ರದೇಶವಿದೆ ಈ ರಾಯಲ್ಪಾಡು ಭಾಗದಲ್ಲಿ 20 ಸಾವಿರ ಅರಣ್ಯ ಪ್ರದೇಶ ಇದೆ ಈಗ 9 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಬೀಜ ಪ್ರಸರಣ ಮಾಡುತ್ತಿದ್ದೇವೆ. ಶಾಸಕರ ಅದೇಶದಂತೆ ಈ ಅರಣ್ಯ ಪ್ರದೇಶದಲ್ಲಿ ಎಲ್ಲಾ ರೀತಿಯ ಜಾತಿಯ ಬೀಜಗಳನ್ನು ಹಾಕುತ್ತಿದ್ದೇವೆ. ಈ ಒಂದು ಬಿತ್ತನೆ ಬೀಜ ಕಾರ್ಯ ಎರಡು ದಿನಗಳ ಕಾಲ ನಡಯಲಿದೆ ಎಂದರು.
ಈ ವನಮಹೊತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬರೆಡ್ಡಿ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಸಂಜಯ್ರೆಡ್ಡಿ, ಡಿಸಿಎಫ್ ಶಿವಶಂಕರ್, ಎಸಿಎಫ್ ಸಹನಕುಮಾರ್ ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಾಲುಚಂದ್ರ, ಮುದಿಮಡಗು ಅಮರನಾರಾಯಣ, ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಗ್ಗಲಗಟ್ಟ ಶ್ರೀನಿವಾಸರೆಡ್ಡಿ, ಪೆದ್ದರೆಡ್ಡಿ, ಮುಖಂಡರಾದ ಪಾತೂರು ನಾಗರಾಜ್, ಶಂಕರರೆಡ್ಡಿ, ಆಲವಾಟ ಮಂಜುನಾಥರೆಡ್ಡಿ, ಬೋರವೆಲ್ ಕೃಷ್ಣಾರೆಡ್ಡಿ, ದಿಂಬಾಲ ವೆಂಕಟಾದ್ರಿ, ಇನ್ನೂ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.