ಕೋಲಾರದಲ್ಲಿ ದಿನಸಿ ಕಿಟ್ ಮತ್ತು ಆರೋಗ್ಯ ಕಿಟ್‍ಗಳನ್ನು ವಿತರಿಸಿದ ವಿಸ್ಟ್ರಾನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.15: ವಿಸ್ಟ್ರಾನ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಡಿಯಾ ಸಂಸ್ಥೆಯ ವೀಕೇರ್ ಸಿಎಸ್‍ಆರ್ ಕಾರ್ಯಕ್ರಮದ ಅಂಗವಾಗಿ ಇಂದು ಸಂಸ್ಥೆಯ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 400 ಮಂದಿ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಆಹಾರ ಪಡಿತರ ಕಿಟ್‍ಗಳನ್ನು ವಿತರಿಸಿತು.
ಕೋಲಾರದ ಶಾಸಕ ಕೆ. ಶ್ರೀನಿವಾಸಗೌಡ, ವಿಸ್ಟ್ರಾನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಎಂ ರವರು ಕಿಟ್‍ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಮಾಲೂರು, ನರಸಾಪುರ ಮತ್ತು ಬೆಳ್ಳೂರು ತಾಲ್ಲೂಕುಗಳಿಂದ ಆಗಮಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಸದಸ್ಯರು ಆಹಾರ ಹಾಗೂ ವೈದ್ಯಕೀಯ ಕಿಟ್‍ಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಯಾ ಪಂಚಾಯಿತಿ ಸದಸ್ಯರು ಮತ್ತು ಪಿಡಿಒಗಳು ಉಪಸ್ಥಿತರಿದ್ದರು. ವಿತರಣಾ ಕಾರ್ಯಕ್ರಮದಲ್ಲಿ ವಿಸ್ಟ್ರಾನ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸೆಂಥಿಲ್‍ಕುಮಾರ್ ಭಾಗವಹಿಸಿದ್ದರು.
ವಿಸ್ಟ್ರಾನ್ ವೀಕೇರ್ ಸಿಎಸ್.ಆರ್ ಕಾರ್ಯಕ್ರಮದಡಿ ಕಂಪನಿಯು ಈಗಾಗಲೇ 1000 ಮುಖಗವುಸುಗಳನ್ನು ಮತ್ತು 10000 ಮಾಸ್ಕ್‍ಗಳನ್ನು ಜಿಲ್ಲಾ ಪೆÇಲೀಸರಿಗೆ ವಿತರಿಸಿದೆ. ಪಿಎಚ್‍ಸಿ ಮತ್ತು ಸಿಎಚ್‍ಸಿಗಳಲ್ಲಿ ವಿತರಣೆಗಾಗಿ 10 ಆಮ್ಲಜನಕ ಸಾಂದ್ರಕಗಳನ್ನು ಇತ್ತೀಚೆಗೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮಾಲೂರು ಆಸ್ಪತ್ರೆಯಲ್ಲಿ ಹೆಚ್ಚಿನ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಈಗಾಗಲೇ ಸಾವಿರಾರು ಆರೋಗ್ಯ ಕಿಟ್‍ಗಳನ್ನು ನೌಕರರು ಮತ್ತು ಅವರ ಕುಟುಂಬಗಳಿಗೆ ವಿತರಿಸಲಾಗಿದೆ. ಸಮುದಾಯದ ಬದ್ಧತೆಯ ಭಾಗವಾಗಿ ವಿಸ್ಟ್ರಾನ್, ಬೆಂಬಲ ಮತ್ತುಪರಿಹಾರವನ್ನು ವಿಸ್ತರಿಸಲು ಮತ್ತು ಸಮುದಾಯದಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲ ಲಭ್ಯತೆಯನ್ನು ಸುಧಾರಿಸಲು ಒಂದು ತಿಂಗಳ ಕಾಲ ಸಿಎಸ್‍ಆರ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಮತ್ತು ಅಗತ್ಯವುಂಟಾದಂತೆ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸುವ ಭರವಸೆ ನೀಡಿದೆ.