ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ : ರಾಜೇಂದ್ರ ಪ್ರಸಾದ್

ಶ್ರೀನಿವಾಸಪುರ : ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮತದಾರರು ಅಭಿವೃದ್ಧಿ ಪರವಾದ ಅಭ್ಯರ್ಥಿ ಆಯ್ಕೆಗಾಗಿ ಕಾಯುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.

ಪಟ್ಟಣದ ಮುಳಬಾಗಲು ವೃತ್ತದ ಸಮೀಪ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ನಾಲ್ಕು ದಶಕಗಳಿಂದ ಇಬ್ಬರು ವ್ಯಕ್ತಿಗಳು ಮಾತ್ರ ತಾಲ್ಲೂಕಿನ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ . ಆದರೆ ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರ ಹಿಂದುಳಿದೆ ಎಂದು ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಹೆಸರು ಹೇಳದೆ ಟೀಕಿಸಿದರು.

ಕ್ಷೇತ್ರದಲ್ಲಿ ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪಗೊಳ್ಳುತ್ತಿದ್ದಾರೆ. ಎರಡು ವರ್ಷಗಳಿಂದ ತಮ್ಮನ್ನು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದನ್ನು ಸಹಿಸದ ಕೆಲವು ರಾಜಕೀಯ ಮುಖಂಡರು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಗೆದ್ದರೂ ತಾಲ್ಲೂಕಿನಲ್ಲಿ ವಾಸಿಸುವುದಿಲ್ಲ ಎಂದೆಲ್ಲಾ ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು .

ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ ಮಾತನಾಡಿ , ತಾಲ್ಲೂಕಿನಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ . ಜೆಡಿಎಸ್ ನಲ್ಲಿ ನಾಯಕತ್ವದ ಕೊರತೆ ಇದೆ . ಇತರ ಪಕ್ಷಗಳಿಗೆ ನೆಲೆಯಿಲ್ಲ . ಹಾಗಾಗಿ ಮತದಾರರ ಮನೋಭಾವದಲ್ಲಿ ಬದಲಾವಣೆ ಕಂಡು ಬರುತ್ತಿದೆ .

ಕ್ಷೇತ್ರದಲ್ಲಿನ ಸಾಂಪ್ರದಾಯಿಕ ಎದು ರಾಳಿಗಳ ಬಗ್ಗೆ ಒಲವು ಕಡಿಮೆಯಾಗುತ್ತಿದೆ . ಇದು ಬದಲಾವಣೆಗೆ ದಾರಿಮಾಡಿಕೊಡುತ್ತದೆ . ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಬೆಂಬಲಿಗರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು ಎಂದು ಹೇಳಿದರು .

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜ ಶೇಖರರೆಡ್ಡಿ ಮಾತನಾಡಿ , ತಾಲ್ಲೂಕಿ ನಲ್ಲಿ ವಿವಿಧ ರಾಜಕೀಯ ಪಕಗಳ ಕಾರ್ಯಕರ್ತರು ಬದಲಾವಣೆ ಬಯಸಿ , ಗುಂಜೂರು ಶ್ರೀನಿವಾಸರೆಡ್ಡಿ ಅವರ ಬೆನ್ನಿಗೆ ನಿಂತಿದ್ದಾರೆ .

ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿ ಬಯಸಿದ ಅನ್ಯ ಪಕ್ಷಗಳ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ನಿಷ್ಠೆ ಬದಲಿಸಿದ್ದಾರೆ ಎಂದು ಹೇಳಿದರು .

ಬೇರೆ ಬೇರೆ ಪಕ್ಷಗಳ ಮುಖಂಡರಾದ ಸಮಿವುಲ್ಲಾ , ನಾಗೇಶ್ , ಸಾಗರ್ , ಕೀರ್ತಿ , ನಾಗಭೂಷಣ್ , ನವೀನ್ , ಸುರೇಶ್ , ರವಿ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು .

ಮುಖಂಡರಾದ ಪಠಾಣ್ ಸಮೀಉಲ್ಲಾ ಖಾನ್, ದೊರೆಸ್ವಾಮಿ , ಶ್ರೀರಾಮರೆಡ್ಡಿ , ಗವಿರೆಡ್ಡಿ , ಈರಪ್ಪ , ರಮೇಶ್ , ಶ್ರೀನಾಥ್ , ಚಂದ್ರಪ್ಪ ಕೆಂಪರೆಡ್ಡಿ ಇದ್ದರು .