ಕುಂದಾಪುರ, ಫೆ.17: ಇತ್ತೀಚೆ ನೆಡೆದ ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷರಾಗಿ ವಿಲ್ಸನ್ ಡಿಆಲ್ಮೇಡಾ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಾಂತಿ ಪಿಂಟೊ, ನಿಕಟಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷೆಯಾಗಿ ಆಶಾ ಕರ್ವಾಲ್ಲೊ, ಉಪಾಧ್ಯಕ್ಷೆಯಾಗಿ ಡಾ.ಸೋನಿ ಡಿಕೋಸ್ತಾ, ಸಹಕಾರ್ಯದರ್ಶಿಯಾಗಿ ವಿನಯಾ ಡಿಕೋಸ್ತಾ, ಖಜಾಂಚಿಯಾಗಿ ಪ್ರೇಮಾ ಡಿಕುನ್ಹಾ, ಸಹ ಖಜಾಂಚಿಯಾಗಿ ಮಾರ್ಕ್ ಡಿಸೋಜಾ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೂಲಿಯೆಟ್ ಪಾಯ್ಸ್, ರಾಜಕೀಯ ಸಂಚಾಲಕರಾಗಿ ಮೈಕಲ್ ಗೊನ್ಸಾಲ್ವಿಸ್, ಸರ್ಕಾರಿ ಸವಲತ್ತುಗಳ ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಅಂತರೀಕ ಲೆಕ್ಕ ತಪಾಸಣೆಗಾರರಾಗಿ ಬರ್ನಾಡ್ ಡಿಕೋಸ್ತಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಗೀತ ಪಾಯ್ಸ್, ಜೆಮ್ಸ್ ಡಿಸೋಜಾ, ಜೊನ್ಸನ್ ಡಿಆಲ್ಮೇಡಾ, ಡಾ.ರೆನ್ನಿ ವಿಲ್ಸನ್, ವಿಲ್ಸನ್ ಮತ್ತು ಜೋಸೆಫ್ ಡಿಸೋಜಾ ಆಯ್ಕೆಯಾಗಿದ್ದಾರೆ. ಚುನಾವಣ ಅಧಿಕಾರಿಯಾಗಿ ಎರಿಕ್ ಗೊನ್ಸಾಲ್ವಿಸ್, ವೀಕ್ಷಕರಾಗಿ ಫ್ಲೈವನ್ ಡಿಸೋಜಾ ಆಗಮಿಸಿ ಚುನಾವಣ ಪ್ರಕಿøಯೆನ್ನು ನೆಡೆಸಿಕೊಟ್ಟರು.
ಸಂಘಟನೇಯ ಅಧ್ಯಾತ್ಮಿಕ ನಿರ್ದೇಶಕ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ಕಥೊಲಿಕ್ ಸಭಾ ಕುಂದಾಪುರ ಘಟಕವು ಹಲವಾರು ವರ್ಷಗಳಿಂದ ಉತ್ತಮ ಸೇವೆ ನೀಡುತ್ತದೆ, ಈ ಭಾರಿ ಆಯ್ಕೆಯಾದ ತಂಡಕ್ಕೆ ಶುಭ ಕೋರುತ್ತೇನೆ ಎಂದು ತಿಳಿಸಿದರು.