

ಉಡುಪಿ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಗಾಢ ಮೌನಕ್ಕೆ ಜಾರಿದ್ದನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಲ್ಮಣ್ ಪ್ರಶ್ನಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಿಗೆ ಆದ ಅನ್ಯಾಯ ಆಗಿರಬಹುದು, ಅಥವಾ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ ಆಗಿರಬಹುದು, ಈಗ ಸಹಸ್ರಾರು ಮಹಿಳೆಯರನ್ನು ಶೋಷಣೆಮಾಡಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡದ್ದಲ್ಲದೇ ಅವನ್ನೆಲ್ಲಾ ವೀಡಿಯೋ ಮಾಡಿದ ಆರೋಪ ಹೊತ್ತ ಎನ್ ಡಿ ಎ ವತಿಯಿಂದ ಹಾಸನ ಲೋಕಸಭೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿ ಪ್ರಜ್ವಲ್ ಬಗ್ಗೆ ಸನ್ಮಾನ್ಯ ಪ್ರಧಾನಿ ಆದಿಯಾಗಿ ಎಲ್ಲರೂ ಮೌನವಾಗಿರುವುದು ಮಹಿಳೆ ಅಂದರೆ ಬಿಜೆಪಿಗೆ ಅಸಡ್ಡೆ, ಮಹಿಳೆ ಕೇವಲ ಭೋಗಕ್ಕಾಗಿ ಇರುವ ವಸ್ತು ಎಂಬ ಕೀಳು ಭಾವನೆ ಇರುವುದು ಸಾಬೀತು ಪಡಿಸುತ್ತದೆ ಎಂದು ಅನಿತಾ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಏಕೆ ಓಡಿದರು, ತನ್ನ ಮೇಲಿನ ಆರೋಪಕ್ಕೆ ಸಾರ್ವಜನಿಕವಾಗಿ ಅವರು ಪ್ರತಿಕ್ರಿಯಿಸದೇ ವಿದೇಶಕ್ಕೆ ಪಲಾಯನ ಮಾಡುವುದೆಂದರೆ ಅವರು ಅಪರಾಧ ಮಾಡಿದ್ದಾರೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ. ಬಿಜೆಪಿ ಮಹಿಳಾ ನಾಯಕರುಗಳಾದರೂ ಈವಿಚಾರವನ್ನು ಮಾತಾಡಬೇಕು ಎಂದು ಅವರು ಆಗ್ರಹಿಸಿದರು.