

(ಚಿತ್ರ ಸಾಂದರ್ಭಿಕ)
ಬೆಂಗಳೂರು: ಕಾರು ಚಲಾಯಿಸುತ್ತೀರುವಾಗಲೂ ಗಂಡ-ಹೆಂಡತಿ ಜಗಳಕ್ಕೆ ಕಾದು, ಕಾರು ಪಲ್ಟಿಯಾದ ಘಟನೆ ಬೆಂಗಳೂರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯ ಬಳಿ ತಡರಾತ್ರಿ ಘಟನೆ ನಡೆದಿದೆ. ಗಂಡ ಹೆಂಡತಿ ಮಾರುಕಟ್ಟೆ ಕಡೆಯಿಂದ ಐ 20 ಕಾರಿನಲ್ಲಿ ಬರುತ್ತಿರುವಾಗ ಗಂಡ ಹೆಂಡತಿ ನಡುವೆ ಜಗಳವಾಗಿದೆ.. ಕಾರಿನಲ್ಲಿ ಪತಿ- ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ದಿಢೀರನೇ ಕಾರಿನ ಸ್ಟೇರಿಂಗ್ ಎಳೆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಈ ಅವಘಡದಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು.ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದ್ದು, ಘಟನೆ ವಿಷಯ ತಿಳಿದು, ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ಭೇಟಿ ನೀಡಿ ಪಲ್ಪಿಯಾಗಿದ್ದ ಕಾರನ್ನು ಮೇಲೆತ್ತಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.