ಹೊಸ ಮಾರ್ಗಸೂಚಿಗಳನ್ನು ಒಪ್ಪಿಂಡ ವಾಟ್ಸ್ಯಾಪ್, ಫೇಸ್ಬುಕ್, ಗೂಗಲ್ – ಬ್ಯಾನ್ ಇಲ್ಲ, ಟ್ವಿಟರ್ ಮಾತ್ರ ಒಪ್ಪಿಲ್ಲ

JANANUDI.COM NETWORK

ನವದೆಹಲಿ,ಮೇ: ಸೋಷಿಯಲ್ ಮೀಡಿಯಾದ ದಿಗ್ಗಜರಾದ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್​​ಆಪ್​, ಗೂಗಲ್​ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲವೆಂದು,ಇವುಗಳು ಭಾರತದಲ್ಲಿ ಇವು ಬ್ಯಾನ್ ಆಗುವವ ಸಂದರ್ಭವಿತ್ತು, ಆದರೆ ಇದೀಗ ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಕೂ, ಶೇರ್‌ಚಾಟ್, ಟೆಲಿಗ್ರಾಮ್ ಮತ್ತು ಲಿಂಕ್ಡ್‌ ಇನ್ ಸೇರಿದಂತೆ ಸೋಷಿಯಲ್ ಮೀಡಿಯಾದ ದಿಗ್ಗಜರಾದ  ಮಾದ್ಯಮ ಕಂಪನಿಗಳು ಹೊಸ ಡಿಜಿಟಲ್​​ ನಿಯಮಗಳನ್ನು ಒಪ್ಪಿಕೊಂಡಿದ್ದು, ಐಟಿ ಸಚಿವಾಲಯದ ಜೊತೆ ಮಾಹಿತಿ ಹಂಚಿಕೊಂಡಿವೆ.

 ಆದರೆ ಟ್ವಿಟ್ಟರ್​ ಇನ್ನೂ ಸಹ ಹೊಸ ನಿಯಮಗಳನ್ನು ಪಾಲಿಸಲು ಒಪ್ಪಿಗೆ ನೀಡಿಲ್ಲ. ಜೊತೆಗೆ ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ಪಿಟಿಐ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿವೆ.  
    .