JANANUDI.COM NETWORK

ಸುಳ್ಯ .31: ಸುಳ್ಯದ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಪೊಲೀಸರು, ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು, ಅವರಲೊಬ್ಬ ಆರೋಪಿಯಶಿಬು ಎಂಬವನ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ.
ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು, ಆರೋಪಿಗಳನ್ನು ಬಂದಿಸಿದ್ದರು, ಇದರಲ್ಲಿ ಶಿಬು ಎಂಬಾತನಿಗೆ ಮೇ.29 ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಕಂಡು ಬಂದಿತ್ತು.
ವೈದ್ಯರುಗಳು ಕಾರ್ಯಾಚರಣೆ ನಡೆಸಿ ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣಗಳನ್ನು ಹೊರ ತೆಗೆದಿದ್ದಾರೆ. ಉಂಗುರ, ಓಲೆ, ಸೇರಿದಂತೆ 30 ಕ್ಕೂ ಅಧಿಕ ಆಭರಣಗಳು ಹೊರತೆಗೆದಿದ್ದಾರೆ. ಕದ್ದ ಚಿನ್ನವನ್ನು ಆತ ನುಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಚಿನ್ನಸ್ಗಬಾರದೆಂದು,ನಾನು ಐಸ್ ಕ್ರೀಮ್ ಜೊತೆ ಚಿನ್ನ ನುಂಗಿದ್ದಾಗಿ ಶಿಬು ಬಾಯಿ ಬಿಟ್ಟಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.