ಕೋಲಾರದಲ್ಲಿ ನೂತನ ಬಿಇಒ ಕನ್ನಯ್ಯನವರಿಗೆ  ಸ್ವಾಗತ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ತಾಲೂಕಿಗೆ ನೂತನವಾಗಿ ಆಗಮಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಕನ್ನಯ್ಯನವರನ್ನು ಕರ್ನಾಟಕ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ ಮುಖಂಡತ್ವದಲ್ಲಿ ಪುಸ್ತಕ ನೀಡುವುದರೊಂದಿಗೆ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಕುರಿತು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ತಿಂಗಳ ಒಂದನೇ ತಾರೀಕು ಶಿಕ್ಷಕರ ವೇತನ ಸಿಗುವಂತೆ ಮಾಡುವುದು ಮೊದಲನೇ ಆದ್ಯತೆ ಎಂದು ತಿಳಿಸುತ್ತಾ ಶಿಕ್ಷಕರು ಯಾವುದೇ ಸಂದರ್ಭದಲ್ಲಿ ತಮ್ಮ ಅಹವಾಲನ್ನು ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಳ್ಳಲು ಬದ್ಧ ಎಂದು ತಿಳಿಸಿದರು.
ಶಿಕ್ಷಕರು ಸಹ ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ಮಾಡಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಕಿವಿ ಮಾತನ್ನು ಹೇಳಿದರು. ಜೊತೆಗೆ ಮುಂದಿನ ದಿನಗಳಲ್ಲಿ ಗುರು ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಿಕ್ಷಕರ ಎಲ್ಲಾ ಸೇವಾ ಪುಸ್ತಕಗಳ ನೆರಳಚ್ಚು ಪ್ರತಿ ನೀಡುವುದರೊಂದಿಗೆ ಸರಿಪಡಿಸುವ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರ ಹತ್ತು ವರ್ಷ ಹದಿನೈದು ವರ್ಷ ಇಪ್ಪತ್ತು ವರ್ಷ 25 ವರ್ಷಕ್ಕೆ ಸಿಗುವ ಬಡ್ತಿಗಳನ್ನು ಕಾಲಕಾಲಕ್ಕೆ ಸಿಗುವಂತೆ ಮಾಡಬೇಕು ಮತ್ತು ಶಿಕ್ಷಕರು ತಮ್ಮದೇ ಸಾಮಾನ್ಯ ಭವಿಷ್ಯ ನಿಧಿಯ ಸಾಲಕ್ಕಾಗಿ ಹಾಕುವ ಅರ್ಜಿಗಳನ್ನು ಮತ್ತಿತರ ಯಾವುದೇ ವೈದ್ಯಕೀಯ ಬಿಲ್ಲುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘದ ಗೌರವಾಧ್ಯಕ್ಷ ಎಂ.ಎನ್. ಶ್ರೀನಿವಾಸಮೂರ್ತಿ ಕಾರ್ಯಾಧ್ಯಕ್ಷ ಆರ್.ನಾಗರಾಜು, ಉಪಾಧ್ಯಕ್ಷ ಎಂ. ಮುನಿರಾಜು, ಮಹಿಳಾ ಉಪಾಧ್ಯಕ್ಷೆ ಚಾಮುಂಡೇಶ್ವರಿ ದೇವಿ, ರೇಷ್ಮಾ ತಲತ್ ಖಾನಂ, ಸಹ ಕಾರ್ಯದರ್ಶಿಗಳಾದ ನಾಗವೇಣಿ ಮುನಿರಾಜು ಸಂಘಟನಾ ಕಾರ್ಯದರ್ಶಿಗಳಾದ ಸುನಂದಮ್ಮ ಬಿಎಂ ಸುರೇಂದ್ರ ನಟರಾಜ್ ಬಿವಿ ನಂಜುಂಡಪ್ಪ ಮುದುವತ್ತಿ ಮುನಿಯಪ್ಪ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಕೆ ಬಾಬು ವಿ ಶ್ರೀನಿವಾಸ್ ಬೆಟ್ಟದ ನಾಗಪ್ಪ , ನಿಕಟಪೂರ್ವ ಕಾರ್ಯದರ್ಶಿಗಳಾದ ಸಿ. ನಾರಾಯಣಸ್ವಾಮಿ ಜಿಲ್ಲಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರುಗಳಾದ ಬಿ ಮುನಿರಾಜು, ಅಶ್ವತಪ್ಪ ಮಂಜುಳಾ, ಮಂಜುನಾಥಾಚಾರಿ, ಇಬ್ರಾಹಿಂ ಖಾನ್, ಸಂಘಟನಾ ಕಾರ್ಯದರ್ಶಿಗಳಾದ ಭಾಗ್ಯಲಕ್ಷ್ಮಮ್ಮ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಶ್ರೀರಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕಲಾವತಿ ಮತ್ತಿತರರಿದ್ದರು.