ಶಿರ್ವ:ವೆಬ್ ಅಭಿವೃದ್ಧಿಯು ಇಂಟರ್ನೆಟ್ ಅಥವಾ ಇಂಟ್ರಾನೆಟ್ ಗಾಗಿ ವೆಬ್ಸೈಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಒಳಗೊಂಡಿರುವ ಕೆಲಸವಾಗಿದೆ. ವೆಬ್ ಅಭಿವೃದ್ಧಿಯು ಸರಳ ಪಠ್ಯದ ಏಕ ಸ್ಥಿರ ಪುಟವನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು ಸಂಕೀರ್ಣ ವೆಬ್ ಅಪ್ಲಿಕೇಶನ್ಗಳು, ಎಲೆಕ್ಟ್ರಾನಿಕ್ ವ್ಯವಹಾರಗಳು ಮತ್ತು ಸಾಮಾಜಿಕ ನೆಟ್ವರ್ಕ್ ಸೇವೆಗಳವರೆಗೆ ಇರುತ್ತದೆ.
ವೆಬ್ ಅಭಿವೃದ್ಧಿಯು ಬೆಳೆಯುತ್ತಿದೆ ಮತ್ತು ಅದರ ಪರಿಧಿಯನ್ನು ವಿಸ್ತರಿಸುತ್ತಿದೆ.
ವೆಬ್ ಇಂಟರ್ಫೇಸ್ಗಳನ್ನು ಸ್ವಯಂಚಾಲಿತಗೊಳಿಸುವುದರಿಂದ ಹಿಡಿದು ಮಿಷನ್-ನಿರ್ಣಾಯಕ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವವರೆಗೆ, ವೆಬ್ ಅಭಿವೃದ್ಧಿಯು ಕನಸುಗಳನ್ನು ವಾಸ್ತವಿಕವಾಗಿ ಪರಿವರ್ತಿಸುತ್ತಿದೆ.ಕಂಪ್ಯೂಟರ್ ಪದವೀಧರರು ತಮ್ಮ ಕೌಶಲ್ಯಗಳನ್ನು ನಿಯಮಿತವಾಗಿ
ಅಭಿವೃದ್ಧಿ ಕೌಶಲ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಲು ಉದ್ಯಮಕ್ಕೆ ಇದು ಅತ್ಯಂತ ಅಗತ್ಯವಾಗಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಅಪ್ಡೇಟ್ ಮತ್ತು ಅಪ್ಗ್ರೇಡ್ ಆಗುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ವಿಫಲ ಉದ್ಯೋಗ ಅವಕಾಶಗಳಿವೆ ಎಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಮತ್ತು ಶ್ರೀ ಮದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್, ಬಂಟ ಕಲ್ಲು ಸಂಯುಕ್ತವಾಗಿ ಒಡಂಬಡಿಕೆಯ ಅನ್ವಯ ಡಿಸೆಂಬರ್ 12 ಮತ್ತು 13 ರಂದು ಏರ್ಪಡಿಸಿದ ವೆಬ್ ಅಭಿವೃದ್ಧಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಬಂಟಕಲ್ಲಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಜೆ ಭಟ್ ಮಾತನಾಡಿದರು.
ಪ್ರಸ್ತುತ ಯುಗದಲ್ಲಿ ವಿದ್ಯಾರ್ಥಿಗಳು ಉದ್ಯಮದ ಗುಣಮಟ್ಟವನ್ನು ಪೂರೈಸುವ ಅಗತ್ಯವಿದೆ. ಕಾಲೇಜಿನ ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಉದ್ಯೋಗವನ್ನು ಪಡೆಯಲು ಅವರು ಪ್ರಸ್ತುತ ಪ್ರವೃತ್ತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು
ಬಂಟಕಲ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಸಹನಾ ಮತ್ತು ಸೌಮ್ಯ ಎಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರಾತೇಕ್ಷಿಕ ಮೂಲಕ ಕಾರ್ಯಗಾರ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಕಾರ್ಯಗಾರದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಿತ್ ಎಚ್ ಕಲ್ಮಾಡಿ, ಸಂಪತ್ ಕುಮಾರ್, ಯಜ್ಞೇಶ್,ವಿಶ್ವಾಸ್ ಪ್ರಭು ಕಾಲೇಜಿನ ಅನುಪ್ ನಾಯಕ್, ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದರು. ಕು. ಪದ್ಮಶ್ರೀ ಮತ್ತು ಬಳಗ ಪ್ರಾರ್ಥಿಸಿ, ಗೌರವ್ ಬಂಗೇರ ವಂದಿಸಿದರು. ವಿಕ್ಷಾ ಶೆಟ್ಟಿ ಸ್ವಾಗತಿಸಿ, ರಿತ ರಿಷಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.