JANANUDI.COM NETWORK
ಹುಬ್ಬಳ್ಳಿ ಮಾ. 28 : ಹಿಜಾಬ್ ಧರಿಸಿ ಬಂದರೇ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂದು ಮುಂಚಿತವಾಗಿ ತಿಳಿಸಿದರೂ, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯನ್ನು ಪರೀಕ್ಷೆ ಬರೆಯಲು ನಿರಾಕರಿಸಿ ವಾಪಾಸ್ಸು ಕಳುಹಿಸಿದ ಘಟನೆ ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಸಮವಸ್ತ್ರ ಧರಿಸಿ ಬರುವಂತೆ ಶಾಲಾ ಸಿಬ್ಬಂದಿ ವರ್ಗ ತಿಳಿಸಿದ್ದರು. ಸಿಬ್ಬಂದಿ ವರ್ಗದ ಆದೇಶವನ್ನು ನಿರಾಕರಿಸಿ ಪಾಲಕರ ಜತೆಗೆ ಶಾಲೆ ತನಕ ಬಂದ ವಿದ್ಯಾರ್ಥಿನಿ ಮನೆಗೆ ವಾಪಾಸ್ಸು ಹೋಗಿದ್ದಾಳೆ / ಹಿಜಾಬ್ ಸಂಘರ್ಷವಿದ್ದರೂ ಮಕ್ಕಳು ಶಾಲಾ ನಿಯಮದಂತೆ ಪರೀಕ್ಷೆಗೆ ಹಾಜರಾಗಿ ಎಂದು ವಿವಿಧ ಮುಸ್ಲಿಂ ಧಾರ್ಮಿಕ ಮುಖಂಡರು ಕೂಡ ಮನವಿಯನ್ನು ಮಾಡಿದ್ದರು. ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸದಂತೆ ಮನವಿ ಮಾಡಿದ್ದರೂ ಕೂಡ, ಇಂತಹ ಘಟನೆ ನಡೆದಿದೆ.