ಶ್ರೀನಿವಾಸಪುರ : ಶಿಕ್ಷಕರ ಅನೇಕ ಬೇಡಿಕೆಗಳು ಇದ್ದು, ನೌಕರರ ಸಂಘವು ಶಿಕ್ಷಕರ ಬೇಡಿಕೆಗಳಿಗೆ ಸಹಮತ ನೀಡಿ ಹೋರಾಟ ಮಾಡಲಾಗುವುದು ಎಂದರು. ಇಂದು ಅನೇಕ ಹೋರಾಟಗಳ ಮೂಲಕ ನೌಕರರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ ಎಂದು ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಸೋಮವಾರ ಅಕ್ಷರದವ್ವ ಸಾವಿತ್ರಿ ಭಾಯಿಪುಲೆ ಸ್ಮರಣೆ, ಹಾಗು ನಮ್ಮಭಿಮಾನದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರದ ನೌಕರರಿಗೆ 7 ನೇ ವೇತನವನ್ನು ನೀಡುತ್ತದೊ ಅದೇ ರೀತಿಯಲ್ಲಿ ರಾಜ್ಯ ಸರ್ಕಾರವು ನೀಡಲು ಎಲ್ಲಾ ರೀತಿಯ ವ್ಯವಸ್ಥೆಗಳು ನಡೆದಿದ್ದು, ಇದು ಒಂದು ರೀತಿಯಲ್ಲಿ ಸುವರ್ಣಾಅಕ್ಷರದಲ್ಲಿ ಬರೆಯುವಂತಹುದು. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ತಂದರೆ ರಾಜ್ಯ ಸರ್ಕಾರವು ಜಾರಿಗೆ ತರುವ ರೀತಿಯಲ್ಲಿ 7ತ್ ಫೇ ವೇತನ ಆಯೋಗದ ಅಧ್ಯಕ್ಷ ಸುಧಾಕರರಾವ್ ರವರು ರಾಜ್ಯ ಶಿಫಾರಸ್ಸು ಮಾಡಿದ್ದು, ಅದರಂತೆ ರಾಜ್ಯ ಸರ್ಕಾರ ಯತಾವತ್ತಾಗಿ ಮಾಡಬೇಕು ಇಲ್ಲವಾದಲ್ಲಿ ಒಂದು ತಿಂಗಳು ಗಡುವು ನೀಡಿ ನಂತರ ಮುಖ್ಯ ಮಂತ್ರಿಗಳ ಬಳಿ ಚರ್ಚೆ ಮಾಡುವುದಾಗಿ ಮಾಹಿತಿ ನೀಡಿದರು
ಎನ್ಪಿಎಸ್ ಹೋಗಿ ಒಪಿಎಸ್ನ್ನು ಜಾರಿಗೆ ತರಲು ನೂರಕ್ಕೆ ನೂರರಷ್ಟು ಮಾಡಿಸುದಾಗಿ ಭರವಸೆ ನೀಡಿದರು. ಸಂಘದಲ್ಲಿ 22 ಕೋಟಿ ಉಳಿಸಿದ್ದೇವೆ. 5 ವರ್ಷಗಳಲ್ಲಿ ಸರ್ಕಾರಿ ನೌಕರರಿಗೆ ಅನೇಕ ಕೆಲಸ ಕಾರ್ಯರೂಪಕ್ಕೆ ತರಲಾಗಿದೆ. ಸಂಘದಲ್ಲಿ ಎಲ್ಲರೂ ಒಗ್ಗಟ್ಟಿನೊಂದಿಗೆ ಇದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶ್ರೀನಿವಾಸಪುರ ನೌಕರರ ಭವನ ಕಟ್ಟಡ ದುರಸ್ಥಿಗಾಗಿ ತಾಲೂಕು ಅಧ್ಯಕ್ಷರು ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ 25 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿ ತಾಲೂಕಿನ ನೌಕರರ ಮತ್ತು ಶಿಕ್ಷಕರ ವಿವಿಧ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಗೌರವಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಗಿರಿಗೌಡ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಯಲ್ಪಾಡು ಸಿ.ಆರ್.ನಾಗಭೂಷಣ, ಕಾರ್ಯದರ್ಶಿ ಕಳಾಚಾರಿ, ಖಜಾಂಚಿ ಎಂ.ವಿ. ವೆಂಕಟೇಶ್, ಗೌರವಾಧ್ಯಕ್ಷ ಡಾ|| ಜಿ.ಎಸ್.ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬ್ಯಯಾರೆಡ್ಡಿ ಶಾಲಾ ಶಿಕ್ಷಣ ಇಲಾಖೆ ತಾಲೂಕು ಅಧ್ಯಕ್ಷ ಕಲಾಶಂಕರ್, ಹಾಗು ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು , ತಾಲೂಕಿನ 24 ವಿವಿಧ ಇಲಾಖೆಯ 32 ನಿರ್ದೇಶಕರು ಹಾಜರಿದ್ದರು.