ಶ್ರೀನಿವಾಸಪುರ : ನಾವೆಲ್ಲರೂ ಸೇರಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನು ಶೈಕಣಿಕವಾಗಿ ಬಲಗೊಳಿಸಬೇಕು ಎಂದು ತಹಶೀಲ್ದಾರ್ ಜಿ.ಎನ್. ಸುದೀಂದ್ರ ಶಿಕ್ಷಕರಿಗೆ ಕರೆ ನೀಡಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವದ ಕಾರ್ಯಕ್ರಮವನ್ನು ಸಂಜೆ ಉದ್ಗಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ , ವಿದ್ಯಾರ್ಥಿಗೆ ಕಲಿಯುವ ಆಸಕ್ತಿ ಇರಬೇಕು .
ಶಿಕ್ಷಕನಿಕೆ ಕಲಿಸುವ ಆಸಕ್ತಿ ಇರಬೇಕು ಗುರು ಶಿಷ್ಯರ ಭಾಂದವ್ಯ ಉತ್ತಮವಾಗಿದರೆ, ಏನು ಬೇಕಾದರೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಒ ಎಸ್.ಶಿವಕುಮಾರಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಮುನಿಲಕ್ಷ್ಮಿಯ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಇದ್ದು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿ ಸರ್ಕಾರವು ನೀಡುವಂತಹ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಉರ್ದು ಶಿಕ್ಷಕರ ಸಂಘ ಮಾಜಿ ಅಧ್ಯಕ್ಷ ಶೇಕ್ ಫಯಾಜ್ಉದ್ದೀನ್ ಮಾತನಾಡಿದರು.
ಎಪಿಜಿ ಅಬ್ದುಲ್ಕಲಾಂ ಟ್ರಸ್ಟ್ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು .
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗುಂಡ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಬಿಆರ್ಸಿ ಕೆಸಿ ವಸಂತ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಇಸಿಒ ಸಿರಾಜ್, ಪುರಸಭೆ ಸದಸ್ಯ ತಜಮುಲ್, ಸಿಆರ್ಪಿಗಳಾದ ಆರೀಫ್, ಅಸ್ಮದ್ಖಾನ್, ಎಪಿಜಿ ಅಬ್ದುಲ್ಕಲಾಂ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ಇಲಿಯಾಜ್, ಕಾರ್ಯದರ್ಶಿ ಅಕ್ರಂಪಾಷ, ಖಜಾಂಚಿ ಇದಾಯಿತ್ ಅಹಮ್ಮದ್, ಸಂಘನಾಕಾರ್ಯದರ್ಶಿ ಇಂತೀಯಾಜ್, ಸದಸ್ಯ ಅಲ್ಲಾಬಕಾಶ್, ಎಸ್ಡಿಎಂಸಿ ಅಧ್ಯಕ್ಷ ಇದಾಯಿತ್ಉಲ್ಲಾಖಾನ್, ಮುಖ್ಯ ಶಿಕ್ಷಕ ಸಾದಿಕ್ಪಾಷ, ಶಿಕ್ಷಕರಾದ ರೀಯಾಜಾ ಖಾನಂ, ನೂರುನ್ನಿಸಾ, ಅಸ್ಮತ್ಸುಲ್ತಾನ್, ಭಾರತಮ್ಮ, ಅಮ್ಮಜಾನ್ ಇದ್ದರು.
ಈ ಸಂದರ್ಭದಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ನ ಪ್ರಧಾಧಿಕಾರಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.