ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು ನಾವು, ಭಾರತ ಸರ್ಕಾರವಲ್ಲ ರೊಮೇನಿಯದಲ್ಲಿ ಕೇಂದ್ರ ಸಚಿವ ಸಿಂದಿಯಾಗೆ ಅಲ್ಲಿನ ಮೇಯರ್ ತರಾಟೆ.

.

ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೊಮೇನಿಯದಲ್ಲಿ ತರಾಟೆ.

JANANUDI.COM NETWORK

ರೊಮೇನಿಯಾ,4: ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ನಾವು ಮಾಡಿದ್ದು, ನೀವಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ರೊಮೇನಿಯಾ ಮೇಯರ್ ಹೇಳುವ ವಿಡಿಯೋ ವೈರಲ್ ಆಗಿದ್ದು, ಭಾರೀ ಸುದಿಯಾಗಿದೆ


ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೂಮಾನೀಯಾದಿಂದ ಕೂಡ ವಿರೋಧ ವ್ಯಕ್ತವಾಗಿದೆ. ಆದರೆ ನಮ್ಮ ಕೆಲವು ಭಾರತೀಯರಿಗೆ ಇದು ಅರ್ಥವಾಗಲ್ಲ. ಅಧಿರಕಾರ ಪಡೆದುಕೊಂಡು ೮ ವರ್ಷ ಪೂರೈಸಿದರೂ, ಇನ್ನೂ ಹಿಂದಿನ ಸರಕಾರಗಳಿಗನ್ನು ದೂರುವ ಕೆಟ್ಟ ಚಾಳಿ ಪ್ರಧಾನಿಯವರು ನಡೆಸಿಕಒಂಡು ಹೋಗುತ್ತಾ ಇದ್ದಾರೆ. ಅದಕ್ಕೆ ಭಾರತದಲ್ಲಿ ಡಾಕ್ಟರ್ ವ್ರತ್ತಿ ವಿದ್ಯಾಭಾಸವನ್ನು ಪಡೆದುಕೊಳ್ಳಲು ಭಾರತದಲ್ಲಿ ಕೋಟಿ ಕೋಟಿಯಲ್ಲಿ ಖರ್ಚು ಮಾಡಬೇಕಾಗುತ್ತದೆ ಅದಕ್ಕೆ ಹಿಂದಿನ ಸರಕಾರಗಳು ಕಾರಣ ಎಂದು, ಯುಕ್ರೆನಲ್ಲಿ ವೈದ್ಯಕೀಯ ವಿದ್ಯಾರ್ಥಿ ಯುದ್ದದಲ್ಲಿ ಸತ್ತ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರ ಬಂದು ೮ ವರ್ಷಗಳಾಗುತ್ತ ಬಂತು, ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನು ಇವರು ಸರಿ ಮಾಡಬಹುದಿತ್ತಲ್ಲ. ಯಾಕೆ ಮಾಡಲಿಲ್ಲ. ಯಾಕೆ!!? ಇವರು ಹಿಂದಿನ ಸರ್ಕಾರಗಳು ಮಾಡಿರುರವ ಜನಪ್ರಿಯ ಯೋಜನೆಗಳ ಹೆಸರನ್ನು ಮಾತ್ರ ಬದಲಾಯಿಸುವುದರಲ್ಲೇ ಮಗ್ನವಾಗಿದ್ದು, ತಮ್ಮ ಕಾಲ ಕಳೆಯುತಿದ್ದಾರಾ ಎಂಬ, ವಿಷಯ ಪ್ರಭುದ್ದ ನಾಗರಿಕರಿಗೆ ಕಾಡುತ್ತಿದೆ. ಸಣ್ಣ ಸಣ್ಣ ಕಾದಟಕ್ಕೆ ಮೀಸಲಾದ ಮೋದಿ ಸರ್ಕಾರಕ್ಕೆ ಯುದ್ದ ಏನೆಂದು ಗೊತ್ತಿಲ್ಲ. ಇದು ನೀಜವಾದ ಯುದ್ದ. ಇಲ್ಲಿನ ಕಷ್ಟ್, ಕಾರ್ಪಣ್ಯ, ದುಸ್ಥಿತಿ ಇವರಿಗೆ ತಿಳಿಯದು. ನಗರ ಪ್ರದೇಶಗಳಲ್ಲಿ ನಡೆಯುವ ಯುದ್ದ, ನಿಜಕ್ಕೂ ಸ್ವರ್ಗವು ನರಕ ಮಾಡುವವ ಭಯಾನಕ ಸ್ಥಿತಿ. ವಾಸ್ತವ ತಿಳಿಯದ ಸರ್ಕಾರ ನಮ್ಮ ಭಾರತೀಯರನ್ನು ಮೊದಲೇ ಕರೆ ತರುವಲ್ಲಿ ವಿಫಲವಾದುದು, ಇಂದಿನ ಸರಕಾರದ ದಯನೀಯ ವಿಫಲವಾಗಿದೆ. ಕೇಂದ್ರ ಸರ್ಕಾರ ಕೇವಲ ಮತ ಗಳಿಕೆ, ಚುನಾವಣೆಯಲ್ಲಿ ಮುಳುಗಿ ಭಾರತವನ್ನು ಮುಳುಗಿಸುವತ್ತ ನಡೆದಿದೆ ಎನ್ನಲು ದುಖವಾಗುತ್ತದೆ’


ನಮ್ಮ ಭಾರತೀಯರು ಹಲವು ಕಷ್ಟ ಕಾರ್ಪಣ್ಯದಿಂದ ಬದುಕಿ ರುಮಾನೀಯಕ್ಕೆ ತೆರಳಿ ಸಚಿವ ಸಿಂಧಿಯಾ ಆಪರೇಷನ್‌ ಗಂಗಾದ ದೊಡ್ಡಸ್ತಿಕೆ ಮಾತನಾಡುವಾಗ ಅಡ್ಡಿಪಡಿಸಿ, ‘ ಈ ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ್ದು ನೀವಲ್ಲ’ ನಾವು ಎಂದು ಮೇಯರ್‌ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮುಜುಗರವನ್ನು ತಪ್ಪಿಸುವ ಯತ್ನವನ್ನು ಸಿಂದಿಯಾ ಮಾಡಿದ್ದಾರೆ‌. ರೊಮೇನಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಿಂಧಿಯಾ ಮಾತನಾಡುತ್ತಾ, ತಮ್ಮ ಸರ್ಕಾರವನ್ನು ಹೊಗಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಲೇ ಇದ್ದ ರೊಮೇನಿಯಾದ ಮೇಯರ್, ಸಿಂಧಿಯಾ ಮಾತಿಗೆ ಉತ್ತರಿಸಿ ವಾಸ್ತವವಾಗಿ ಮನವರಿಕೆ ಮಾಡಿಸಿದ್ದಾರೆ. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳು ಮೇಯರ್ ಗೆ ಚಪ್ಪಾಳೆ ತಟ್ಟಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ