ಶ್ರೀನಿವಾಸಪುರ : ಈ ಭಾಗದಲ್ಲಿ ಅತಿ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದೇವೆ ಕೃಷಿ ಆಧಾರಿತ ಕಂಪನಿಗಳು ಎಂದರೆ ಉಪ್ಪಿನಕಾಯಿ ಕಾರ್ಖಾನೆಗಳು ಹಣ್ಣು ತಿರುಳು ತೆಗೆಯುವ ಕಾರ್ಖಾನೆಗಳು ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ತಯಾರು ಮಾಡುವಂತಹ ಕಾರ್ಖಾನೆಗಳು ಹಾಗೂ ಇವುಗಳಿಗೆ ಬೇಕಾದಂತಹ ಪ್ಯಾಕಿಂಗ್ ಮೆಟೀರಿಯಲ್ ಇಂದ ಹಿಡಿದು ಇನ್ನು ಅನೇಕ ಕಂಪನಿಗಳು ಬರಬಹುದು ನಂತರ ನಾವು ತಯಾರಿಸಿದ ಪ್ರಾಡಕ್ಟ್ಸ್ ಅನ್ನು ದೇಶವಿದೇಶಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತಹ ಪ್ರಕ್ರಿಯೆಗಳನ್ನು ಮಾಡಿದರೆ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರ್ ಚಿನ್ನಪ್ಪರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾವು ಬೆಳಗಾರರ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಈ ಭಾಗದ ಜನಪ್ರತಿನಿಧಿಗಳಾದ ಶಾಸಕರು ಹಾಗೂ ಮಾಜಿ ಶಾಸಕರು ಇಬ್ಬರು ಸಹ ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಆಲೋಚನೆಯನ್ನು ಮಾಡಿ ಸರ್ಕಾರಗಳ ಗಮನವನ್ನು ಸೆಳೆದು ಈ ಕಾರ್ಯಕ್ರಮಗಳು ಕಾರ್ಯಗತವಾದರೆ ನಮ್ಮ ಶ್ರೀನಿವಾಸಪುರ ತಾಲೂಕು ಅಭಿವೃದ್ಧಿ ಆಗುವುದರಲ್ಲಿ ಎರಡನೇ ಮಾತಿಲ್ಲ 50 ವರ್ಷಗಳು ಕಾಲ ನಮ್ಮನ್ನು ನೀವಿಬ್ಬರೂ ಆಳ್ವಿಕೆ ನಡೆಸಿದ್ದೀರಾ ಈಗ ಕಾಲ ಕೂಡಿ ಬಂದಂತಿದೆ ಕೇಂದ್ರದಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣನವರು ಬೃಹತ್ ಕೈಗಾರಿಕಾ ಮಂತ್ರಿಗಳಿದ್ದಾರೆ, ಶಾಸಕರು ಈ ಬಗ್ಗೆ ಗಮನವಿಟ್ಟು ಆಲೋಚನೆ ಮಾಡಬೇಕು ಮಾಜಿ ಶಾಸಕರು ಹಾಗೂ ಅನುಭವಿ ರಾಜಕಾರಣಿಗಳು ಅವರದೇ ಸರ್ಕಾರವಾದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದೆ ಸರ್ಕಾರದಲ್ಲಿ ಇವ್ರ ವರ್ಚಸ್ಸು ಕೂಡ ಚೆನ್ನಾಗಿದೆ ಇವರು ಒಂದು ದೊಡ್ಡ ಮಟ್ಟದಲ್ಲಿ ಆಲೋಚನೆ ಮಾಡಿ ರಾಜ್ಯ ಸರ್ಕಾರವನ್ನು ಈ ಕಡೆಗೆ ಗಮನಹರಿಸುವಂತೆ ಮಾಡಿದರೆ ಅವರಿಗೂ ಸಹ ಮುಂದಿನ ದಿನಗಳಲ್ಲಿ ಉತ್ತಮ ಹೆಸರಿರುತ್ತದೆ ಎಂಬುದು ಕೂಡ ನಮ್ಮಅಭಿಪ್ರಾಯವಾಗಿರುತ್ತದೆ ಈ ಇಬ್ಬರು ಶಾಸಕರು ಸಹ ಕೊನೆ ಕಾಲಘಟ್ಟದಲ್ಲಿ ಈ ಒಳ್ಳೆಯ ಕಾರ್ಯಕ್ರಮಗಳಿಗೆ ಕಾರಣೀಕರ್ತರಾಗಲಿ ಎಂಬುದು ನಮ್ಮ ಆಸೆಯಾಗಿದೆ ಎಂದರು.
ಮಾವು ಬೆಳಗಾರರ ಸಂಘದ ಪೋಷಕ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವ ವೇಳೆ ರೈತರೊಂದಿಗೆ ಸಮಾಲೋಚನೆ ನಡೆಸಿ ನಂತರ ಭೂಮಿಯನ್ನು ವಶಪಡಿಸಿಕೊಳ್ಳುಬಹುದು ಎಂಬುದು ಕಾಯ್ದೆ ಇದೆ ಆ ಕಾಯ್ದೆಯ ಮೂಲಕ ಅಧಿಕಾರಿಗಳು ವ್ಯವಹರಿಸಬೇಕು ಎಂದರು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗುದಂತೆ ವ್ಯವಹರಿಸಿ, ರೈತರಿಗೆ ಅನುಕೂಲವಾದ ಕೈಗಾರಿಕೆಗಳನ್ನು ಸ್ಥಾಪಿಸಲಿ ನಮ್ಮ ಅಭ್ಯಂತರವಿಲ್ಲ ಎಂದರು.
ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರದಾನ ಕಾರ್ಯದರ್ಶಿ ಪಾತಕೋಟಿ ನವೀನ್ ಕುಮಾರ್, ಸಂಚಾಲಕ ಸೈಯದ್ ಫಾರೂಕ್ ಇದ್ದರು.