ಹಿಜಾಬ್‌ ಹಾಕುವುದಕ್ಕೆ ವಿರೋಧ ಮಾಡಿದಕ್ಕೆ ಕೋರ್ಟ್‌ಗೆ ಹೋಗಲು ನಾವೇ ಹೇಳಿದ್ದು – ಅಮೃತ್ ಶೆಣೈ

JANANUDI.COM NETWORK

ಉಡಪಿ: ಹಿಜಾಬ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾವೇ ಕೋರ್ಟ್ ಮೊರೆ ಹೋಗಲು ತಿಳಿಸಿದೆನೆಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
“ಹಿಜಾಬ್‌ವಿರೋಧ ಆರಂಭವಾದ ಬಳಿಕ ನಾವು ಕಾಲೇಜಿಗೆ ಭೇಟಿ ನೀಡಿದೆವು. ಆಗ ಅಲ್ಲಿ ಹಿಜಾಬ್‌ ಅವಕಾಶ ಇರಲಿಲ್ಲ ಎಂದು
ತಿಳಿಯಿತು . ಅದಕ್ಕೆ ವಿದ್ಯಾರ್ಥಿಗಳಿಗೆ ಕೋರ್ಟ್‌ಗೆ ನಾವೇ ಹೋಗಲು ಹೇಳಿರುವುದು. ನಾವೇ ಅವರಿಗೆ ವಕೀಲರ ವ್ಯವಸ್ಥೆ ಮಾಡಿರುವುದು ಕೂಡ ನಾವೇ. ಕೋರ್ಟ್ ಹೋಗುವುದು ಅವರ ಹಕ್ಕು” ಎಂದು ಅಮೃತ್ ಶೆಣೈ ತಿಳಿಸಿದ್ದಾರೆ
.

ಉಡುಪಿ ತಾಲೂಕು ಸೌಧದಲ್ಲಿ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಣೈ, ನಮಗೆ ಕುಂದಾಪುರ, ಉಡುಪಿ ಕಾಲೇಜುಗಳಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಅಸಮಾಧಾನ ಇದೆ. ಆ ಕಾಲೇಜುಗಳಲ್ಲಿ ಎಷ್ಟೋ ವರ್ಷಗಳಿಂದ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಬಂದು ಕಲಿತು ಡಾಕ್ಟರ್, ಇಂಜಿನಿಯರ್ ಆದವರು ಇದ್ದಾರೆ. ಅಲ್ಲಿ ಇಷ್ಟು ದಿನ ಸಮಸ್ಯೆ ಇರಲಿಲ್ಲ. ಈಗ ಏಕಾಏಕಿ ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಪುಂಡಾಟಿಕೆ, ಮಾಡಿ ಸಮಸ್ಯೆ ತಂದೊಡ್ಡಿದ್ದಾರೆ
ಕೇಸರಿ ಬಣ್ಣ ಎಂಬುದು ಧಾರ್ಮಿಕತೆಗೆ ಸಂಬಂಧ ಪಟ್ಟ ಪವಿತ್ರ ಬಣ್ಣ. ಈ ರೀತಿ ಕಾನೂನು ಉಲ್ಲಂಘನೆ ಚಟುವಟಿಕೆಗಳಿಗೆ ಬಳಸುವುದು ಸರಿಯಲ್ಲ. ಇಂತಹ ಘಟನೆಗಳು ಮುಂದೆ ಆಗದಂತೆ ಎಚ್ಚರ ವಹಿಸಬೇಕೆಂದು ನಾವು ಸರಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.