JANANUDI.COM NETWORK
” ಭಾರತದ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನವಾಗಿದೆ ನಮ್ಮ ಸಂವಿಧಾನವು ಪ್ರತಿಪಾದಿಸಿರುವ ಸ್ವಾತಂತ್ರ್ಯ ಸಮಾನತೆ ಸಹೋದರತ್ವ ಮತ್ತು ನ್ಯಾಯ ತತ್ವಗಳ ಮೂಲಕ ಒಂದು ಸರ್ವಶ್ರೇಷ್ಠ ರಾಷ್ಟ್ರವನ್ನು ರಚಿಸಲು ಸಾಧ್ಯ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಮನಗಂಡು ಅವುಗಳ ಜಾರಿಗೆ ಪ್ರಯತ್ನಿಸಿದಾಗ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ” ಎಂದು ಉಡುಪಿ ಜಿಲ್ಲಾ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ವೈಟಿ ರಾಘವೇಂದ್ರ ಹೇಳಿದರು. ಅವರು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಆಶ್ರಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಜೆಸಿಂತಾ ನತಾಲಿಯಾ ಲೋಬೊ ಸ್ವಾಗತಿಸಿ ಕುಮಾರಿ ವರ್ಷಿಣಿ ವಂದಿಸಿ, ಕುಮಾರಿ ವೈಷ್ಣವಿ ನಿರೂಪಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಸುನಿತಾ ಕಾಮತ್ ಎನ್ಎಸ್ಎಸ್ ಘಟಕ ನಾಯಕ ಶನ್ವಿನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ- ಶಿಕ್ಷಕೇತರರ ವಿದ್ಯಾರ್ಥಿಗಳು ಮತ್ತು ಎನ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.