JANANUDI.COM NETWORK

ಬೆಂಗಳೂರು ಮೇ.12; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಚಂಡ ಮಾರುತ ಬೀಸುವುದರಲಿದ್ದು ಅದಕ್ಕೆ ವಯನ್ಮಾರ್ ತೌಕ್ತೆ ಎಂದು ಹೆಸರಿಟ್ಟಿದ್ದು, ಇದು ಮೇ 14 ರಂದು ರೂಪುಗೊಳ್ಳಲಿದ್ದು ಮೇ 16 ರ ವೇಳೆಗೆ ಬಿರುಸಾಗಿ, ಗಂಟೆಗೆ 40-50 ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಂದರ್ಭವಿದ್ದು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೇಶದ ಕರ್ನಾಟಕ,ಕೇರಳ,ತಮಿಳ್ನಾಡು ಪ್ರದೇಶದಲ್ಲಿ ಮಳೆಯಾಗಲಿದೆ.
ರಾಜ್ಯದಲ್ಲಿ . ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ತುಮಕೂರು, ಚಿತ್ರದುರ್ಗ, ಹಾವೇರಿ, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದೆ ಈ ವಾರದ ಅಂತ್ಯದವರೆಗೂ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್. ಪ್ರಕಾಶ್ ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರಂತರ ನಾಲ್ಕೈದು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ವಯನ್ಮಾರ್ ತೌಕ್ತೆ ಚಂಡ ಮಾರುತ ಮೇ 16 ಬಳಿಕ ಗುಜರಾತಿನ ಕಛ್ ಬಳಿ ಸಾಗಿ ಒಮಾನ್ ತಲುಪುವಾಗ ಇನ್ನಷ್ಟು ತೀವ್ರತೆ ಪಡೆಯುತ್ತದೆ ಎಂದು ತಿಳಿಸಲಾಗಿದೆ.