ಶ್ರೀನಿವಾಸಪುರ : ನೀರು ಅಮೂಲ್ಯವಾದ ಸಂಪತ್ತು ಇದನ್ನ ಸುರಕ್ಷಿತವಾಗಿ, ಮಿತವಾಗಿ ಬಳಸುವಂತೆ ತಿಳಿಸಿ, ಜಲ ಮೂಲಗಳನ್ನು ಸಂರಕ್ಷಿಸಿ ಇದರಿಂದ ಅಂತರ್ಜಲವನ್ನು ಹೆಚ್ಚಿಸಿ ಮುಂದಿನ ಪೀಳಗೆಗೆ ಉಳಿಸುವ ಪ್ರಯತ್ನ ಮಾಡುವುದು ನಮ್ಮೆಲರ ಕರ್ತವ್ಯ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಶ್ರೀನಿವಾಸಪುರ ವಿದಾನ ಸಭಾ ಕ್ಷೇತ್ರದ ಜನಘಟ್ಟ ಗ್ರಾಮದಲ್ಲಿ ೧.೨೨ ಕೋಟಿಯಲ್ಲಿ ಗ್ರಾಮದ ೩೨೨ ಮನೆಗಳಿಗೆ ಮನೆ ಮನೆಗೂ ಗಂಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರವು ಎಷ್ಟೇ ಉಪಯುಕ್ತ ಯೋಜನೆಗಳು ತಂದರೂ ಸಹ ನಾಗರೀಕರು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವದರ ಮೇಲೆ ಆ ಯೋಜನೆ ಪ್ರಬಾವ ಬೀರುತ್ತದೆ ಆದ್ದರಿಂದ ನಾಗರೀಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಓವರ್ ಹೆಡ್ ಟ್ಯಾಂಕ್ನ್ನು ನೂತನ ನಿರ್ಮಾಣ ಹಾಗು ಕೊಳವೆ ಬಾವಿ ಕೊರೆಯಲು ಹಣವನ್ನು ಬಳಿಸಿಕೊಳ್ಳವಂತೆ ಸೂಚನೆ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ, ಪಿಡಿಒ ರವೀಂದ್ರ, ಗ್ರಾ.ಪಂ ಸದಸ್ಯ ಆಂಜನೇಯರೆಡ್ಡಿ , ಮುಖಂಡ ನಾರಾಯಣಸ್ವಾಮಿ, ಗುತ್ತಿಗೆದಾರ ಮೋಹನ್, ಇಂಜಿನೀಯರ್ ದೆವೇಗೌಡ ಇದ್ದರು.