

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಈಬಿಸ್ ಸಿ ಒ ಇಂಜಿನಿಯರಿಂಗ್ ಸೂಟ್ ಎ ಎಂ ಎ ಮೈಕ್ರೋ ಕೋರ್ಸುಗಳು ಮತ್ತು ಐ ಇ ಇ ಇ ಮೇಲೆ ಕೇಂದ್ರೀಕರಿಸಿ ವಿ ಟಿ ಯು ಕನ್ಸೋರ್ಟಿಯಮ್ ತರಭೇತಿ ಕಾರ್ಯಗಾರ ನಡೆಯಿತು.6ನೇ ಸೆಮೆಸ್ಟರ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನಾ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿ ಸಲಾಯಿತು. ಈಬಿಸ್ ಸಿಒ – ಐ ಇ ಇ ಇ ದಕ್ಷಿಣ ಭಾರತದ ತರಭೇತಿ ವ್ಯವಸ್ಥಾಪಕ ಎಂ.ಎಸ್ ಶ್ರೀನಿವಾಸ ನೇತೃತ್ವ ವಹಿಸಿದ್ದರು.ತರಭೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ರವರು ವಹಿಸಿ, ಕಾರ್ಯಗಾರವನ್ನು ಉದ್ಘಾಟಿಸಿದರು.ಐ ಇ ಇ ಇ ನ ಸದಸ್ಯರಾಗಿರುವ ಅವರು ವಿ. ಟಿ. ಯು ಕನ್ಸೋರ್ಟಿಯಂ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಮೆಲ್ವಿನ್ ಡಿಸೋಜಾ ಹಾಗೂ ಗ್ರಂಥಾಪಾಲರಾದ ಶ್ಯಾಮ್ ನಾಯ್ಕ ಉಪಸ್ಥಿತರಿದ್ದರು.ಪ್ರಾಧ್ಯಾಪಕಿ ಶ್ರೀನಿಧಿ ರಾವ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.