ಶ್ರೀನಿವಾಸಪುರ ೧ : ಮತದಾನವೆಂದರೆ ನಮ್ಮ ದೇಶದ ಸಂವಿಧಾನದ ಪ್ರಕಾರ ೧೮ ವರ್ಷ ತುಂಬಿದ ಪ್ರಾಯದ ಪ್ರತಿಯೊಬ್ಬರು ಆ ಪವಿತ್ರ ಹಕ್ಕನ್ನು ಚಾಲಾಯಿಸಲೇಬೇಕು. ನಮ್ಮ ಮತ ಬಹಳ ಪವಿತ್ರವಾದದ್ದು, ಅದು ನಮ್ಮ ಹಕ್ಕು ಅದರ ಜೊತೆಗೆ ನಮ್ಮ ಕರ್ತವ್ಯವೂ ಇದೆ. ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗು ತಾ.ಪಂ.ಇಒ ಜಿ.ಎಸ್.ಸತೀಶ್ಕುಮಾರ್ ಹೇಳಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಚಾಲಕರಿಗೆ ಪ್ರಯಾಣಿಕರಿಗೆ ಮತದಾನದ ಅರಿವು ಕರಪತ್ರಗಳನ್ನು ನೀಡುವುದರ ಮೂಲಕ ಮಾತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರಿಗೆ ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಮತ್ತು ಅವರ ಭವಿಷ್ಯಕ್ಕೆ ಮತದಾನ ಎಷ್ಟು ಮುಖ್ಯ ಎನ್ನುವದರ ಕುರಿತು ವಿವರಿಸಿದರು ಹಾಗು ಮೇ ೧೦ ರಂದು ನಡೆಯುವ ಸಾವರ್ತ್ರಿಕ ಚುನವಾಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು, ಮಾಡಿಸಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವು ಗ್ರಾಮಗಳಲ್ಲಿನ ಹಿರಿಯರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಿ, ಮತದಾನ ಮಾಡಲಿಲ್ಲವೆಂದರೆ ದೇಶದ ಪರಿಸ್ಥಿತಿ ಏನಾಗುತ್ತದೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಕಡ್ಡಾಯವಾಗಿ ಮತದಾನವನ್ನು ಮಾಡಿಸುವುದಕ್ಕೆ ಪ್ರೇರೇಪಣೆ ನೀಡಿ ಮತದಾನವನ್ನು ಮಾಡಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಬಸ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮತದಾನದ ಕರಪತ್ರ ನೀಡುವುದರ ಮೂಲಕ ಹಾಗು ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.
ತಾ.ಪಂ.ಸಹಾಯಕ ನಿರ್ದೇಶಕ ರಾಮಪ್ಪ, ತಾ.ಪಂ ಸಿಬ್ಬಂದಿಗಳಾದ ಲಕ್ಷ್ಮಿಶ್ ಕಾಮತ್ , ಚೇತನ್ , ಪುರಸಭೆಯ ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನಚಂದ್ರ, ಸಿಬ್ಬಂದಿಗಳಾದ ಸುರೇಶ್, ಸಂತೋಷ, ಪ್ರತಾಪ್,ಎಸ್.ಶಿವಪ್ರಸಾದ್ ಇದ್ದರು.