

ಶ್ರೀನಿವಾಸಪುರ: ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಜೆ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ರೋಣೂರಿನಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕೆ ಮಾತನಾಡಿದ ಅವರು, ಜೆಡಿಎಸ್ನ ಜಲಧಾರೆ ಯೋಜನೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ವರದಾನವಾಗಲಿದೆ. ಈ ಯೋಜನೆಯಡಿ ಜಿಲ್ಲೆಗೆ ಕುಡಿಯಲು ಹಾಗೂ ವ್ಯವಸಾಯಕ್ಕೆ ಯೋಗ್ಯವಾದ ನೀರು ಪೂರೈಸಲಾಗುವುದು. ಪಂಚರತ್ನ ಯೋಜನೆ ಸಮಾಜದ ಎಲ್ಲ ವರ್ಗದ ಜನರ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣಿಗೆ ರೂ.೨ ಲಕ್ಷ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರತಿ ರೈತ ಕುಂಟುAಬಕ್ಕೆ ರೂ.೧೦ ಸಾವಿರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಇದೆ. ಮತದಾರರು ೧೦ ವರ್ಷಗಳಿಂದ ನಿಂತ ನೀರಿನಂತಿರುವ ಪರಿಸ್ಥಿತಿ ಬದಲಾಯಿಸಲು ಮುಂದಾಗಿದ್ದಾರೆ. ಜಿ.ಕೆ.ವೆಂಕಟಶಿವಾರೆಡ್ಡಿ ಶಾಸಕರಾಗಿದ್ದ ೪ ಅವಧಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಅವರ ಕೈಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ,ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೂರನಹಳ್ಳಿ, ಅಂಜಪ್ಪ ಮಾಜಿ ಸದ್ಯಸರಾದ. ಗೋಟ್ಟಕುಂಟ್ಟೆ.ಕೃಷ್ಣಾ ರೆಡ್ಡಿ, ಆರ್.ಕೆ. ಮಂಜುನಾಥ್ ರೆಡ್ಡಿ, ಮುಖಂಡರಾದ ಎಸ್.ಎಲ್.ಎನ್.ಮಂಜುನಾಥ್, ಇಮರಕುಂಟೆ.ವಕೀಲ. ಕೆ.ಮಾರುತಿ ರೆಡ್ಡಿ, ಕನಿಗಾನಹಳ್ಳಿ. ಎಸ್ ಅನಂದ್,,ವೆಂಕಟೇಶ್, ಶೇಷಾಪುರ ,ಗೋಪಾಲ್, ದಡಮಲಡೂಡ್ಡಿ .ಶ್ರೀನಾಥರೆಡ್ಡಿ, ಸಂತೋಷ್, ಕೂಂಡ ಸಂದ್ರ.ಜೆ.ಶ್ರೀನಿವಾಸ್, ಮುರಳಿ, ಇದ್ದರು.