ಕುಂದಾಪುರ ಏಪ್ರಿಲ್ 3ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್.ಸಿ.ಸಿ, ರೇಂಜರ್ಸ್ ಮತ್ತು ರೋವರ್ಸ್, ಎಲೆಕ್ಟ್ರೋಲ್ ಲಿಟರಸಿ ಕ್ಲಬ್ ತಾಲೂಕು ಪಂಚಾಯತ್ ಕುಂದಾಪುರ, ನಮ್ಮ ಭೂಮಿ ಸಂಸ್ಥೆ ಮತ್ತು ಸ್ವೀಪ್ ಸಂಸ್ಥೆ ಸಹಯೋಗದಲ್ಲಿ “ಮತದಾರರ ಜಾಗೃತಿ ಕಾರ್ಯಕ್ರಮ”ವು ನಡೆಯಿತು.
ಅಸೆಂಬ್ಲಿ ಮಟ್ಟದ ಮಾಸ್ಟರ್ ತರಬೇತುದಾರರಾದ ಸದಾನಂದ ಬೈಂದೂರು ಅವರು ಮತದಾರರ ಜಾಗೃತಿ ಕುರಿತು ಮಾತನಾಡಿ ಮತದಾನದ ಪ್ರಾಮುಖ್ಯತೆ ಮತ್ತು ಮತದಾನವು ಪ್ರತಿಯೊಬ್ಬ ಮತದಾರನ ಹಕ್ಕು, ಅದನ್ನು ಚಲಾಯಿಸಬೇಕು. ಯಾವುದೇ ಮತದಾರ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ , ರಾಷ್ಟ್ರೀಯ ಸೇವಾ ಯೋಜನೆ ಘಟಕ ಯೋಜನಾಧಿಕಾರಿ ಅರುಣ್ ಎ.ಎಸ್., ರೇಂಜರ್ಸ್ ಮತ್ತು ರೋವರ್ಸ್ ಸಂಯೋಜಕರಾದ ಅಕ್ಷತಾ, ಎಲೆಕ್ಟ್ರೋಲ್ ಲಿಟರಸಿ ಕ್ಲಬ್ ಸಂಯೋಜಕರಾದ ದುರ್ಗಾಪ್ರಸಾದ್ ಮಯ್ಯ ಮತ್ತು ನಮ್ಮ ಭೂಮಿ ಸಂಸ್ಥೆಯ ಸಂಯೋಜಕರಾದ ಕೃಪಾ ಎಮ್.ಎಮ್, ನರಸಿಂಹ ಗಾಣಿಗ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕ ಯೋಜನಾಧಿಕಾರಿ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೆಡ್ ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ವಿದ್ಯಾರಾಣಿ ಸ್ವಾಗತಿಸಿದರು.