

ಜನ ಔಷಧಿ ದವಸದ ಐದನೇ ದಿನ ದಂದು ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಕರ್ಕಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಇದರ ಅಧ್ಯಕ್ಷತೆಯನ್ನು ಲಯನ್ಸ್ ತಲ್ಲೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮುತ್ತಯ್ಯ ಶೆಟ್ಟಿ, ಸದಾನಂದ ಶೆಟ್ಟಿ , ಲಯನ್ ನಾರಾಯಣ ಶೆಟ್ಟಿ (ಖಜಾಂಚಿ) ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಸುದೇಶ್ ಶೆಟ್ಟಿ, ಲಯನ್ ಕುಸುಮಾಕರ ಶೆಟ್ಟಿ, ಲಯನ್ ರವಿ ದೇವಾಡಿಗ ಅಲ್ಲದೇ ಲಯನ್ಸ್ ನಿತರ ಪದಾಧಿಕಾರಿಗಳು ಮತ್ತು ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಪ್ರತಾಪ್ ವಂದಿಸಿದರು ಲಯನ್ ಸುಂದರ ಕಾರ್ಯಕ್ರಮ ನಿರೂಪಿಸಿದರು. 58 ಯುನಿಟ್ ರಕ್ತ ಸಂಗ್ರಹಿಸಲಾಯಿತು.


