ಶ್ರೀನಿವಾಸಪುರ:: ದೇಶದ ಹಲವು ಕಷ್ಟ ಕಾರ್ಪಣ್ಯಗಳಿಗೆ ಸಹೃದಯತೆಯಿಂದ ಸ್ಪಂದಿಸಿದ ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದ . ಶತಮಾನಗಳ ನಂತರವೂ ಯುವ ಜನತೆ ಸ್ಪೂರ್ತಿಯಾಗಿರುವ ವಿವೇಕಾನಂದರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಸಾಪ ತಾಲೂಕು ಅಧ್ಯಕ್ಷ ಪಿ.ಎಸ್.ಮಂಜುಳ ಹೇಳಿದರು.
ಪಟ್ಟಣದ ಸಾಯಿ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶ್ರೀನಿವಾಸಪುರ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು.
ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಯಾಬಾಲಚಂದ್ರ ಮಾತನಾಡಿ ಪಶ್ಚಿಮಾತ್ಯರ ಬಹಿರ್ ದೃಷ್ಟಿ ಹಾಗೂ ಪೌರೋತ್ಯರ ಅಂತರ್ ದೃಷ್ಟಿಯ ಸಮ್ಮಿಲನ ದಿಂದ ವಿಶ್ವದೇಕಾತ್ಮತೆ ಸಾಧ್ಯ.
ಅಂತರಂಗ ಸಾಧನೆಯೇ ಜೀವಾಳವಾದ ಭಾರತೀಯ ಮೌಲ್ಯಗಳು ಹಾಗೂ ಪಾಶ್ಚಾತ್ಯರ ಶೈಲಿಯಾದ ಬಾಹ್ಯ ಪರಿಸರದಿಂದ ಒದಗುವ ಸೌಕರ್ಯಗಳು ಎರಡನ್ನೂ ಸಮತೋಲನದಿಂದ ಆಳವಡಿಸಿಕೊಂಡರೆ , ಯುವ ಜನತೆ ವಿವೇಕಾನಂದರ ಜಾಗೃತ ಭಾರತದ ಕನಸನ್ನು ನನಸು ಮಾಡಬಹುದು.
ಒಳ್ಳೆಯ ವಿಚಾರಗಳು ಎಲ್ಲಿಯೇ ಇದ್ದರು ತೆಗೆದುಕೊಂಡು , ನಮ್ಮತನವನ್ನು ಉಳಿಸಿಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವಂತೆ ಹೇಳಿ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದರ್ಶನ ಇಂದಿಗೆ ಅತ್ಯಂತ ಪ್ರಸ್ತುತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಯಿ ವಿಜಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಾಂಜನೇಯ ಅವರು ಮಾತನಾಡಿ ವಿದ್ಯಾರ್ಥಿ ದಸೆಯಲ್ಲಿ ಇಟ್ಟುಕೊಳ್ಳುವ ಗುರಿ ಉನ್ನತ ಮಟ್ಟದ್ದಾಗಿರಬೇಕು ಇದರಿಂದ ಸಾಧನೆಗೆ ಹಲವಾರು ಮಾರ್ಗಗಳು ದೊರೆತು ಯಾವುದೋ ಒಂದು ಮಾರ್ಗದಲ್ಲಿ ಯಶಸ್ಸು ಕಾಣಬಹುದು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕು ಆದ್ಯಕ್ಷ ಶಂಕರೇಗೌಡ, ಸ್ವಾಮಿ ವಿವೇಕಾನಂದರ ಜೀವನದ ಅಪರೂಪದ ಘಟನೆಗಳನ್ನು ವಿವರಿಸಿದರು. ಹಿರಿಯ ಸಾಹಿತಿ ಆರ್.ಚೌಡರೆಡ್ಡಿ ಇಂದಿನ ಯುವ ಜನತೆಗೆ ವಿವೇಕಾಂದರ ಆದರ್ಶ ಹೃಧ್ಯವಾಗಲಿ ಎಂದರು. ಕಾಲೇಜಿನ ಉಪನ್ಯಾಸಕ ವೃಂದ ಭಾಗವಹಸಿದ್ದರು.
12, ಎಸ್ವಿಪುರ್ 2 : ಪಟ್ಟಣದ ಸಾಯಿ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶ್ರೀನಿವಾಸಪುರ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಸಮಾರಂಭವನ್ನು ಪಿ.ಎಸ್.ಮಂಜುಳ, ಮಯಾಬಾಲಚಂದ್ರ ಉದ್ಗಾಟಿಸಿದರು.