ಭಂಡಾರ್ಕಾರ್ಸ್ ‘ವಿವೇಕಾನಂದ ಮತ್ತು ಯುವಜನತೆ’ ಉಪನ್ಯಾಸ ಕಾರ್ಯಕ್ರಮ

JANANUDI.COM NETWORK

ಕುಂದಾಪುರ: ನಮ್ಮ ಬದುಕು ನಾವು ಏಣಿಸಿದಂತೆ ಆಗುತ್ತದೆ ಎಂದು ಮಾಜಿ ಸೈನಿಕ ರಾಮಕೃಷ್ಣ ಮಿಶನ್ ಇದರ ಗೋಪಿನಾಥ್ ರಾವ್ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೊಶ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು ಮತ್ತು ರಾಮಕೃಷ್ಣ ಮಿಶನ್ ಮಂಗಳೂರು ಇವರ ಸಹಯೋಗದಲ್ಲಿ ನಡೆದ “ವಿವೇಕಾನಂದ ಮತ್ತು ಯುವಜನತೆ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿವೇಕಾನಂದರ ಆಲೋಚನೆಗಳು ಪ್ರತಿಯೊಬ್ಬರ ಬದುಕಿನುದ್ದಕ್ಕೂ ಆದರ್ಶ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ನಮ್ಮ ಯಶಸ್ವಿ ಬದುಕಿನ ನೆಲೆಗಳು ನಾವೆ ಎಣಿಸಿದಂತೆ ಆಗುತ್ತದೆ. ನಾವು ಒಳ್ಳೆಯ ದಾರಿಯನ್ನೇ ಕಂಡುಕೊಂಡರೆ ಒಳ್ಳೆಯ ದಾರಿಗಳೆ ಸಿಗುತ್ತದೆ. ಹಾಗೆಯೇ ಒಳ್ಳೆಯ ಯಶಸ್ಸು ಸಿಗುತ್ತದೆ. ನಾವು ದುರ್ಬಲರೆಂದು ಭಾವಿಸಿದರೆ ದುರ್ಬಲತೆ ನಮ್ಮನ್ನು ಆವರಿಸುತ್ತದೆ. ಆದರೆ ಸಬಲತೆಯನ್ನು ಸ್ವೀಕರಿಸಿ ಅಚಲ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ತಾನಾಗೆ ನಮ್ಮೊಳಗಾಘುತ್ತದೆ ಎಂದು ತಿಳಿಸಿದರಲ್ಲದೇ ಸೈನ್ಯದ ಕೆಲವು ಉದಾಹರಣೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಂ.ಗೊಂಡ ಮತ್ತು ಕಾಲೇಜಿನ ರೆಡ್ ಕ್ರಾಸ್ ಘಟಕದ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಆರುಂಧತಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಭೂಮಿಕಾ ಹಂದೆ ಅತಿಥಿಗಳನ್ನು ಪರಿಚಯಿಸಿದರು. ಪ್ರಜ್ಞಾ ವಂದಿಸಿದರು
.