ಕುಂದಾಪುರ,ಫೆ.23: ದಿನಾಂಕ 21/02/2023 ರಂದು ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಅತೀ ವಂದನೀಯ ಧರ್ಮಗುರು ವಿನ್ಸೆಂಟ್ ರಾಬರ್ಟ್ ಕ್ರಾಸ್ತಾರವರು ವಿದ್ಯಾಸಂಸ್ಥೆಗಳಿಗೆ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಯ ಕಡತಗಳನ್ನು ಪರಿಶೀಲಿಸಿದರು.
ಬೆಳಗಿನ ಅವಧಿಯಲ್ಲಿ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಬೆಳಗಿನಿಂದ ಸಂಜೆಯ ತನಕ ಇದ್ದು ಸಂಸ್ಥೆಯ ಎಲ್ಲಾ ಶಿಕ್ಷಣಾ ಸಂಸ್ಥೆಗಳಾದ, ಸಂತ ಮೇರಿಸ್ ಹಿರಿಯ ಕಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು.ಕಾಲೇಜ್ ಮತ್ತು ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆಗಳ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆಭೇಟಿ ಮಾಡಿದರು. ಜೊತೆಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಭೋಧಕ ಭೋಧಕೆತರೊಂದಿಗೆ ವಯಕ್ತಿಕವಾಗಿ ಭೇಟಿಯಾಗಿ ಅನೇಕ ಸಮಾಲೋಚನೆ ಮಾಡಿ ಸಲಹೆ ಸೂಚನೆಯನ್ನು ನೀಡಿದರು.
ಈ ಸಮಯದಲ್ಲಿ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಸ್ಥಳೀಯ ಚರ್ಚಿನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊರವರು , ಸಹಾಯಕ ಧರ್ಮಗುರುಗಳಾಗಿರುವ ವಂದನೀಯ ಗುರು ಅಶ್ವಿನ್ ಅರಾನ್ನಾನವರು ಹಾಗು ಕಥೊಲಿಕ್ ಎಜುಕೇಶನಲ್ ಸೊಸೈಟಿ, ಉಡುಪಿ ಧರ್ಮಪ್ರಾಂತ್ಯದ ನಿವೃತ ಪ್ರಾಂಶುಪಾಲರಾದ ಜೆರಾಲ್ಡ್ ಪಿಂಟೊರವರು ಉಪಸ್ಥಿತರಿದ್ದರು.