JANANUDI.COM NETWORK

ಶಿವ೯: ಕಡಲಕಿನಾರೆ ಸ್ವಚ್ಛತಾ ಕಾರ್ಯಕ್ರಮ ಸಂತ ಮೇರಿ ಕಾಲೇಜಿನ ವಿದ್ಯಾಥಿ೯ ಕ್ಷೇಮಾಭಿವೃದ್ಧಿ ಸಂಘ,ಎನ್ ಎಸ್ ಎಸ್,ಎನ್ ಸಿ ಸಿ ಘಟಕಗಳು ಜಂಟಿಯಾಗಿ ಸೇರಿಕೊಂಡು ಕಾಪು ಕಡಲಕಿನಾರೆಯ ಸ್ವಚ್ಛತೆಯನ್ನು ಬಹಳ ಅಸಕ್ತಿಯಿಂದ ಮಾಡುವ ಮೂಲಕ ಪರಿಸರ ನಮ್ಮ ಕಾಳಜಿ , ಸಕಲ ಚರಾಚರ ಜೀವರಾಶಿಗಳು ಆರೋಗ್ಯಪೂಣ೯ವಾಗಿ ಜೀವಿಸಬೇಕಾದರೆ ನಮ್ಮ ಸುತ್ತಮುತ್ತಲಿನ ಜಲ , ವಾಯು,ಮಣ್ಣು ನಿಷ್ಕಲಮಶ ವಾದರೆ ಮಾತ್ರ ಸಾಧ್ಯ ಎಂಬ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶ್ವಸಿಗೊಳಿಸಲಾಯಿತು
ಪ್ರಾಂಶುಪಾಲರಾದ ಡಾ. ಹೇರಾಲ್ಡ್ ಐವನ್ ಮೊನಿಸ್ ರವರು ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಸಮಾಜಕ್ಕೆ ಮಾದರಿ ಎಂದು ತಾವೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಗ೯ದಶ೯ಕರಾಗಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿ ಯಶೋದಾ,ಎನ್ ಎಸ್ ಎಸ್ ಘಟಕದ ಸಂಯೋಜಕ ಶ್ರೀಪ್ರೇಮನಾಥ್,ಎನ್ ಸಿ ಸಿ ಘಟಕದ ಸಂಯೋಜಕ ಲೆಪ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಭಾಗವಹಿಸಿದ್ದರು.

