ವಿಐಪಿ ಶಾಲೆ : ಉತ್ತಮ ಫಲಿತಾಂಶ ಬರಲು ಶಿಕ್ಷಕರ ಶ್ರಮ ಹಾಗು ವಿದ್ಯಾರ್ಥಿಗಳ ಅಕ್ಕರೆ, ಪೋಷಕರ ಸಹಕಾರ ಕಾರಣ-ಡಾ| ವೇಣುಗೋಪಾಲ್‍ ರೆಡ್ಡಿ

ಶ್ರೀನಿವಾಸಪುರ 1 : ಈ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಶ್ರಮ ಹಾಗು ವಿದ್ಯಾರ್ಥಿಗಳ ಅಕ್ಕರೆ, ಪೋಷಕರ ಸಹಕಾರ ಕಾರಣವಾಗಿದ್ದು, ಇವರಲ್ಲೆರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ವಿಐಪಿ ಶಾಲೆಯ ಆಡಳಿತ ಮಂಡಲಿ ಅಧ್ಯಕ್ಷ ಡಾ|| ವೇಣುಗೋಪಾಲ್‍ರೆಡ್ಡಿ ಹೇಳಿದರು.
ರೋಣೂರು ಕ್ರಾಸ್‍ನ ವಿಐಪಿ ಶಾಲೆಯಲ್ಲಿ ಬುಧವಾರ ನಡೆದ ಶಾಲೆಯು ಸಿಬಿಎಸ್‍ಇ ಸಿಲಬಸ್‍ನ ಫಲಿತಾಂಶದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದಕ್ಕಾಗಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಶಾಲೆಯು ಸಿಬಿಎಸ್‍ಸಿ ಬೋರ್ಡ್ ನಿಂದ ಮಾನ್ಯತೆ ಪಡೆದಿದ್ದು, ಕಳೆದ ಮೂರು ವರ್ಷಗಳಿಂದಲೂ 10 ನೇ ತರಗತಿಯಲ್ಲಿ ಶೇಕಡ ನೂರು ರಷ್ಟು ಫಲಿತಾಂಶವನ್ನು ಪಡೆದಿದೆ. ಕೋವಿಡ್ ನಿಂದಾಗಿ ಶಾಲೆಯ ಮೂಲಕ ಪಾಠಪ್ರವಚನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೂ ಸಹ ಶಿಕ್ಷಕರ ಶ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಅನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ಶಿಕ್ಷಣದ ಬಗ್ಗೆ ಪ್ರೇರಣೆ ನೀಡುತ್ತಾ, ಪಾಠ ಪ್ರವಚನಗಳನ್ನು ಮಾಡುತ್ತಾ , ಆ ಸಮಯದಲ್ಲೂ ಶಿಕ್ಷಕರ ಶ್ರಮದಿಂದ ವಿದ್ಯಾರ್ಥಿಗಳ ಸಹಕಾರದಿಂದ ಶೇಕಡ ನೂರುರಷ್ಟು ಫಲಿತಾಂಶ ಲಭಿಸಿದೆ.
ನಗರ ಪ್ರದೇಶಗಳಲ್ಲಿ ಶಿಕ್ಷಣವನ್ನು ಯಾವ ರೀತಿ ನೀಡುತ್ತಿದ್ದಾರೂ , ಅದೇ ರೀತಿಯಲ್ಲಿಯೇ ಗ್ರಾಮೀಣ ಭಾಗದಲ್ಲಿನ ರೈತ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಮ್ಮದಾಗಿದ್ದು, ಬಡವರಿಗೆ , ಮಧ್ಯಮ ವರ್ಗದವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಅದರಂತೆ ಕಡಿಮೆ ವೆಚ್ಚದಲ್ಲಿ ಶುಲ್ಕವನ್ನು ಪಡೆಯಲಾಗುತ್ತಿದೆ.
ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆಡಳಿತ ಮಂಡಲಿ ಮಾರ್ಗದರ್ಶನದೊಂದಿಗೆ ಭೋದಕ ಸಿಬ್ಬಂದಿ ಹಾಗೂ ಭೋದಕೇತರ ಸಿಬ್ಬಂದಿ ಶ್ರಮದೊಂದಿಗೆ ವಿದ್ಯಾರ್ಥಿಗಳ , ಪೋಷಕರ ಸಹಕಾರದೊಂದಿಗೆ ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತಿದೆ.
ಒಟ್ಟು ಶಾಲೆಯಲ್ಲಿ 10ನೇ ತರಗತಿಗೆ 36 ವಿದ್ಯಾರ್ಥಿಗಳ ಪೈಕಿ ಪರೀಕ್ಷೆಯಲ್ಲಿ ಹಾಜರಾಗಿದ್ದು, ಅದರಲ್ಲಿ 40% ವಿದ್ಯಾರ್ಥಿಗಳು ಹೈಡಿಸ್ಟಿಂಕ್ಷನ್, 30 % ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಉಳಿದವರು ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ವಿಶೇಷವಾಗಿ ಶಾಲೆಯ ವಿದ್ಯಾರ್ಥಿ ಅರ್ಜುನ್. ವಿ ಶೇಕಡ 96.6% ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು ಪೋಷಕರಿಗೆ ಹಾಗೂ ಶಾಲೆಯ ಹೆಗ್ಗಲಿಕೆಗೆ ಕಾರಣರಾಗಿರುತ್ತಾನೆ ಎಂದರು.
ಕಾರ್ಯದರ್ಶಿ ಡಾ|| ಕವಿತ, ಪ್ರಾಂಶುಪಾಲ ಮಂಜಿತ್‍ಕೌಮರಿ , ಸಂಯೋಜಕಿ ದೀಪ ಇದ್ದರು.
17, ಎಸ್‍ವಿಪುರ್ : ರೋಣೂರು ಕ್ರಾಸ್‍ನ ವಿಐಪಿ ಶಾಲೆಯಲ್ಲಿ ಶಾಲೆಯು ಸಿಬಿಎಸ್‍ಇ ಸಿಲಬಸ್‍ನ ಫಲಿತಾಂಶದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದಕ್ಕಾಗಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಟಿಯಲ್ಲಿ ಡಾ|| ವೇಣುಗೋಪಾಲ್‍ರೆಡ್ಡಿ ಮಾತನಾಡಿದರು.