ಶ್ರೀನಿವಾಸಪುರ : ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ನರೇಂದ್ರಮೋದಿ ರವರ ನೇತೃತ್ವದ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ನಾಗರೀಕರಿಗೆ ಅರಿವು ಮೂಡಿಸುವುದೇ ಮೂಲ ಉದ್ದೇಶ ಸಂಸದ ಎಸ್.ಮುನಿಸ್ವಾಮಿ ಎಂದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಶನಿವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಂದ್ರ ಮೋದಿಯವರು ಬಡ ಕುಂಟುಂಬ ದಿಂದ ಬಂದಿರುವುದರಿಂದ ಬಡ ಕುಟುಂಬಗಳು ಏಳಿಗೆಗಾಗಿ ಈಗಾಗಲೇ ಆಯುಷ್ಮಾನ್ ಯೋಜನೆ, ಭಾರತ್ ಮುದ್ರಾಯೋಜನೆ, ಕಿಸಾನ್ ಸನ್ಮಾನ್ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ, ಉಜ್ವಲ್ ಯೋಜನೆ , ಸ್ವಚ್ಚ ಭಾರತ್ ಮಿಷನ್ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಹುತೇಕರು ಇದರ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಬಹಳಷ್ಟು ಜನರಿಗೆ ಸದುಪಯೋಗ ಪಡಿಸಿಕೊಂಡು ಜೀವಗಳನ್ನು ಉಳಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ರೋಣೂರು ಚಂದ್ರಶೇಖರ್, ವಿಶ್ವಹಿಂದು ಪರಿಷತ್ ತಾಲೂಕಿನ ಮಾಜಿ ಅಧ್ಯಕ್ಷ ವೇಮಣ್ಣ, ಪರಸಭೆ ಮುಖ್ಯ ಅಧಿಕಾರಿ ವೈ.ಎನ್. ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ ಚಂದ್ರ, ಪರಿಸರ ಅಭಿಯಂತರರು ಲಕ್ಷ್ಮೀಶ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್, ಟಿಎಚ್ಒ ಶರೀಫ್, ಎಸ್ಬಿಐ ಬ್ಯಾಂಕ್ನ ಸರ್ವಿಸ್ ಮೆನೇಜರ್ ಲಲೀತಾ, ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್, ರಿವಿಜನಲ್ ಆಫೀಸ್ ಅಧಿಕಾರಿ ಅಂಬರೀಶ್, ಹಾಗೂ ಅಂಚೆ ಇಲಾಖೆ ಸಿಬ್ಬಂದಿಗಳು ಇದ್ದರು.