ಕೋಲಾರ,ಆ.02: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೂತನವಾಗಿ ಆಗಮಿಸಿರುವ ವಿಜಯಲಕ್ಷ್ಮಿರನ್ನು ಕೋಲಾರ ಜಿಲ್ಲೆಯ ಕಲಾವಿದರ ಒಕ್ಕೂಟದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನೂತನವಾಗಿ ಅಧಿಕಾರ ವಹಿಸಿಕೊಂಡ ವಿಜಯಲಕ್ಷ್ಮಿರನ್ನು ಕಲಾವಿದರು ಸನ್ಮಾನಿಸಿ, ಶುಭ ಹಾರೈಸುವುದರ ಜೊತೆಗೆ ಕಲಾವಿದರ ಸಮಸ್ಯೆಗಳು ಹಾಗೂ ಅಗತ್ಯ ಕ್ರಮಗಳ ಬಗ್ಗೆ ಗಮನಕ್ಕೆ ತಂದರು.
ಕಲಾವಿದರ ಪರವಾಗಿ ಮಾತನಾಡಿದ ಮತ್ತಿಕುಂಟೆ ಕೃಷ್ಣ, ಇಲಾಖೆಯಲ್ಲಿ ಕೆಲವು ಬದಲಾವಣೆಗಳು ಹಾಗೂ ರಂಗಮAದಿರದಲ್ಲಿ ಸೌಂಡ್ ಬದಲಾವಣೆ ಮಾಡಬೇಕು, ಸೌಂಡ್ ಆಪರೇಟರ್ಗಳನ್ನು ನೇಮಕ ಮಾಡಬೇಕು, ಅಧಿಕಾರಿಗಳು ತಾಯಿಯ ಮನಸ್ಸನ್ನು ಹೊಂದಿರಬೇಕು ಎಲ್ಲಾ ಕಲಾವಿದರನ್ನು ಮಕ್ಕಳಂತೆ ಸಮಾನತೆಯಿಂದ ನಡೆಸಿಕೊಂಡು ಹೋಗಬೇಕಾಗಿ ಹಾಗೂ ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರಿಗೆ ಯಾವುದೇ ಇಲಾಖೆಯ ಸಂಭಾವನೆ ನೀಡುವ ಕಾರ್ಯಕ್ರಮಗಳು ನೀಡಬಾರದೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಾವಿದ ಹಿರೇಕರಪನಹಳ್ಳಿ ಯಲ್ಲಪ್ಪ, ದೊಡ್ಡಮಲ್ಲೆ ರವಿ, ಮಾರುತಿ ಪ್ರಸಾದ್, ಗಾಂಧಿನಗರ ಎಚ್.ಎನ್.ಮೂರ್ತಿ, ಮಾರ್ಜೇನಹಳ್ಳಿ ಮುನಿಸ್ವಾಮಿ, ಕೆಂಬೋಡಿ ಸಂತೋಷ್, ಮಾರ್ಜೇನಳ್ಳಿ ಮಹೇಶ್ ಬಾಬು, ರ್ರನಾಗನಹಳ್ಳಿ ರವಿಚಂದ್ರ, ಈಕಂಬಳಿ ಮಂಜು, ಗುಟ್ಲೂರು ಸುನಿಲ್, ಆನಂದ್ ಜೀವಿ ಹಾಗೂ ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ್, ಯಶೋಧ, ಶ್ರೀನಿವಾಸ್, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.