ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ 3 : ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು . ಇಟ್ಟುಕೊಂಡ ಗುರಿ ತಲುಪಲು ನಿರಂತರ ಪ್ರಯತ್ನ ಮತ್ತು ಶ್ರದ್ದೆ , ಭಕ್ತಿಯಿಂದ ಅಧ್ಯಯನ ಮಾಡಬೇಕು ಎಂದು ಆಡಳಿತ ಮಂಡಲಿ ಕಾರ್ಯದರ್ಶಿ ಹಾಗು ಪ್ರಾಶುಂಪಾಲ ಎನ್.ಶಿವಕುಮಾರ್ ಹೇಳಿದರು.
ಪಟ್ಟಣದ ಹೊರವಲಯದ ವಿಜಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಆಡಳಿತ ಮಂಡಲಿಯವರು ಶನಿವಾರ 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ . ಶ್ರದ್ದೆಯಿಂದ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೀರ್ತಿ ತರುವ ಜವಬ್ದಾರಿ ವಿದ್ಯಾರ್ಥಿಗಳ ಮೇಲಿದೆ . ಸ್ವಶಕ್ತಿ,ಛಲ,ಗುರಿಯೊಂದಿಗೆ ವಿದ್ಯೆ ಪಡೆದು ಉನ್ನತ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು .
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್.ಮುರಳಿಮೋಹನ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು.