ಕುಂದಾಪುರ : ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ ಸೀಮಿತ ಎಂಬಂತೆ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದ ಕ್ಲಿಷ್ಟಕರ ಕಾಲದಲ್ಲಿ ಸಮಾನ ಮನಸ್ಕರ ಮಿಲನದಿಂದ ಸಮಾಜದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ವಿದ್ಯಾರಂಗ ಮಿತ್ರ ಮಂಡಳಿಗೆ ಸಲ್ಲುತ್ತದೆ ಎಂದು ಬೈಂದೂರು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಸೂರ್ಯ ಕಾಂತ ಖಾರ್ವಿ ಹೇಳಿದರು ಅವರು ಕುಂದಾಪುರ ಖಾರ್ವಿ ಕೇರಿಯ ವಿದ್ಯಾರಂಗ ಹಾಗೂ ವಿದ್ಯಾನಿಧಿ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾ ಶಂಸನೆ ನುಡಿಗಳನ್ನಾಡಿದರು.
ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಾನಂದ ಖಾರ್ವಿ, ಶ್ರೀಯುತ ಪ್ರಸಾದ ಪ್ರಭು, ಉದ್ಯಮಿಗಳು,ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು,ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಮ್ಮ ರವಿಯವರು ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವೋತಮುಖ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕುಮಾರಿ ಸೌಮ್ಯ ಎಸ್.ಖಾರ್ವಿ ಸ್ಕಾಲರ್ ಶಿಪ್ ಪಡೆಯುವ ವಿದ್ಯಾರ್ಥಿ -ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ರಾದ ದಿನಕರ ಖಾರ್ವಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಪಿಯುಸಿಯಲ್ಲಿ ರಾಜ್ಯಕ್ಕೆ,6ನೇ (rank)ಸ್ಥಾನಿಯಾಗಿದ್ದ ಕುಮಾರಿ ಐಶ್ವರ್ಯ ಖಾರ್ವಿಯವರನ್ನು ಸನ್ಮಾನಿಸಲಾಯಿತು. 116 ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ 2,25,000 (ಎರಡು ಲಕ್ಷದ ಇಪ್ಪತ್ತೈದು ಸಾವಿರ) ವಿದ್ಯಾರ್ಥಿ ವೇತನ ವಿತರಿಸಲಾಯಿತು. ಫಲಾನುಭವಿಗಳ ಪಟ್ಟಿಯನ್ನು ನಾಮದೇವ ಖಾರ್ವಿ, ಲಕ್ಷ್ಮೀ ಚಂದ್ರಕಾಂತ,ಮೋಹನ ಖಾರ್ವಿ, ಗಣಪತಿ ಖಾರ್ವಿ, ದಯಾನಂದ ಖಾರ್ವಿ ಓದಿದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಜನಪದ ಕಲಾತಂಡದ ಮುಖ್ಯಸ್ಥರಾದ ಶ್ರೀ ಮುಕುಂದ ಖಾರ್ವಿ ಪ್ರಾರ್ಥಿಸಿದರು. ನಾಮದೇವ ಖಾರ್ವಿ ಮತ್ತು ಮುಕುಂದ ಖಾರ್ವಿ ಸಂಸ್ಥೆಯ ಉದಯಗೀತೆ” ವಿದ್ಯಾರಂಗ ಉದಯತರಂಗ” ಹಾಡಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂದೀಪ್ ಎಸ್. ಖಾರ್ವಿ ವಾಚಿಸಿದರು.ಚಂದ್ರಶೇಖರ ಖಾರ್ವಿ ನಿರೂಪಿಸಿ, ಸತೀಶ್ ಎಸ್ ಖಾರ್ವಿ ವಂದಿಸಿದರು