ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ (ಎಂ ಎನ್ ಬಿ ಎಸ್ ಟ್ರಸ್ಟ್) ನಡೆಸುತ್ತಿರುವ ವಿದ್ಯಾ ಅಕಾಡೆಮಿಯು ಮಾರ್ಚ್ 26 ರ ರವಿವಾರ ಸಂಜೆ 4 ಗಂಟೆಗೆ ಚಿಕ್ಕ ಮಕ್ಕಳಿಗಾಗಿ ಕುಂದಾಪುರದಲ್ಲೆ ಮೊದಲ ಬಾರಿಗೆ ಕಿಡ್ಸ್ ಕಾರ್ನಿವಲ್ ಅನ್ನು ಆಯೋಜಿಸಿದೆ. ಈ ಕಾರ್ನಿವಲ್ ಮುಖಾಂತರ ಚಿಕ್ಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ವಿವಿದ ಸ್ಥಳಗಳ ಮತ್ತು ವಿವಿದ ಶಾಲೆಗಳ ಮಕ್ಕಳೊಂದಿಗೆ ಬೆರೆತು, ಹಲವು ಮನೋರಂಜನೆ ಮತ್ತು ಆಟೋಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷ ಪಡಲು ಅವಕಾಶ ಮಾಡಿ ಕೊಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ, ಅವರ ಪೋಷಕರಿಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಕ್ಕಳಲ್ಲಿ ಅತೀವಸಂತೋಷದ ವಾತಾವರಣ ಉಂಟುಮಾಡಲು ಪ್ರಯತ್ನಿಸಲಾಗುವುದು. ಹಲವು ಆಟೋಟಗಳ ಜೊತೆಗೆ
ಮಕ್ಕಳ ಪ್ರತಿಭೆಗಳನ್ನ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು. ಹಾಗೆ ಮಕ್ಕಳಿಗೆ ಇಷ್ಟ ಆಗುವ ತಿಂಡಿ ತಿನಿಸುಗಳ ಸ್ಟಾಲ್ ಗಳ ವ್ಯವಸ್ಥೆ ಕೂಡ ಮಾಡಲಾಗುವುದು. ಅಲ್ಲದೆ ಕಾರ್ಯಕ್ರಮದ ರಂಗು ಏರಿಸಲು ಮ್ಯಾಜಿಕ್ ಶೋ ಕೂಡ ಏರ್ಪಡಿಸಲಾಗಿದೆ. ಸ್ಥಳದಲ್ಲಿಯೇ ಮಕ್ಕಳಿಗೆ ಹಲವು ಗೇಮ್ಸ್ ಗಳನ್ನ ಮತ್ತು ಕ್ವಿಜ್ ಗಳನ್ನ ಮಾಡಿ ಮಕ್ಕಳಿಗೆ ಎಲ್ಲರ ಜೊತೆ ವಿಲೀನ ಗೊಳ್ಳುವ ಮನೋಭಾವ ವೃದ್ಧಿಸಲು ಕೂಡ ಪ್ರಯತ್ನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಎಂ ಎನ್ ಬಿ ಎಸ್ ಟ್ರಸ್ಟ್ ಭರಿಸುತ್ತದೆ.
ನೋಂದಣಿಗಾಗಿ 9148019301 ಈ ಸಂಖ್ಯೆಯನ್ನು ಸಂಪರ್ಕಿಸಿ.
ಪತ್ರಿಕಾ ಪ್ರಕಟಣೆಯಲ್ಲಿ ಉಪಸ್ಥಿತಿ
ಪ್ರೊ. ಮೆಲ್ವಿನ್ ಡಿ ಸೋಜಾ, ಕಾರ್ಯಕ್ರಮದ ಸಲಹೆಗರಾರು ಮತ್ತು ಉಪ ಪ್ರಾಂಶುಪಾಲರು, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ
ಡಾ. ರಾಮಕೃಷ್ಣ ಹೆಗ್ಡೆ, ಐ ಎಂ ಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರು
ಶ್ರೀಮತಿ ರಷ್ಮ ಶೆಟ್ಟಿ, ವಿದ್ಯಾ ಅಕಾಡೆಮಿ ಶಾಲೆಯ ಮುಖ್ಯಸ್ಥೆ.