

ಶ್ರೀನಿವಾಸಪುರ : ಪಹಲ್ಗಾಮ್ನಲ್ಲಿ ನಡೆದ ಘಟನೆಯಲ್ಲಿ ಉಗ್ರಗಾಮಿಗಳು ಗಂಡನನ್ನು ಹೆಂಡತಿ ಮತ್ತು ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವುದು ಅಮಾನವೀಯ ಘಟನೆಯಾಗಿದ್ದು , ಇದರ ಪ್ರತೀಕವಾಗಿ ಇದರ ಹಿಂದೆ ಯಾರು ಯಾರು ಇದ್ದಾರೆ ಅವರವರನ್ನು ಶಿಕ್ಷಿಸುವುದಾಗಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅದರಂತೆ 5 ಉಗ್ರಗಾಮಿ ನೆಲಗಳನ್ನು, 4 ಪಾಕಿಸ್ತಾನದಲ್ಲಿನ ಉಗ್ರಗಾಮಿ ನೆಲಗಳನ್ನು ಉಡೀಶ್ಮಾಡಿರುವುದು ಸೈನಿಕರ ಕಾರ್ಯ ಶ್ಲಾಘನೀಯ ಬಿಜೆಪಿ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಎಂದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬಿಜೆಪಿ ಪಕ್ಷ , ಜೆಡಿಎಸ್ ಪಕ್ಷ ಹಾಗು ನಾಗರೀಕರಿಂದ ಅಪರೇಷನ್ ಸಿಂಧೂರ ಯುದ್ದವು ಯಶ್ವಸಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯೋತ್ಸವವನ್ನು ಆಚರಿಸಿ , ಸಿಹಿ ಹಂಚಿ ಮಾತನಾಡಿದರು.
ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಆರ್.ಎನ್.ಚಂದ್ರಶೇಖರ್ ಮಾತನಾಡಿ ನಮ್ಮ ಹೆಮ್ಮಯ ಭಾರತದ ಸೈನ್ಯ ಎಷ್ಟು ಬಲಿಷ್ಟವಾಗಿದೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಾಗುವ ಹಾಗೆ ಮಾಡುತ್ತಿದೆ. ಸಿಂಧೂರಕ್ಕೆ ಎಷ್ಟು ಶಕ್ತಿ , ಎಷ್ಟು ಬಲ ಇದೆ ಎಂಬುದನ್ನು ತಿಳಿಸಿಕೊಟ್ಟಿರುವ ನಮ್ಮ ಸೈನ್ಯಕರಿಗೆ ದೇವರು ಇನಷ್ಟು ಬಲ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮಾವು ಬೆಳಗಾರರ ಕ್ಷ್ಮೇಮಾಭಿವೃದ್ಧಿ ಸಂಘದ ಅಧ್ಯಕ್ ನೀಲಟೂರು ಚಿನ್ನಪರೆಡ್ಡಿ ಮಾತನಾಡಿ ಪಹಲ್ಗಾಮ್ನಲ್ಲಿ ನಡೆದ ನರಮೇದಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗು ರಕ್ಷಣಾ ಸಚಿವ ಅಮೀತ್ಶಾ ರವರ ನೇತೃತ್ವದಲ್ಲಿ ನಮ್ಮ ಸೈನಿಕರು ಉಗ್ರಗಾಮಿಗಳಿಗೆ ತಕ್ಕ ಪಾಠ ಕಳಿಸುತ್ತಿರುವುದು ಶ್ಲಾಘನೀಯ . ದೇಶದ ಭದ್ರತೆಗೆ ನಮ್ಮ ಸೈನಿಕರು ಶ್ರಮಿಸುತ್ತಿದ್ದು, ಆ ಸೈನಿಕರಿಗೆ ದೇವರು ಆಯಸ್ಸು , ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುಲಾಗುತ್ತಿದೆ ಎಂದರು.
ವಕೀಲ ನಾಗರಾಜ್, ಶೆಟ್ಟಿಹಳ್ಳಿ ನಾಗಭೂಷನ್, ಗಟ್ಟಹಳ್ಳಿ ನಾಗೇಶ್, ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣರೆಡ್ಡಿ, ಚೊಕ್ಕನಹಳ್ಳಿ ನಾರಾಯಣಸ್ವಾಮಿ, ಗಟ್ಟಹಳ್ಳಿ ಅಂಬರೀಷ್, ದೇವಲಪಲ್ಲಿ ರಘು, ಬೈರೆಡ್ಡಿ, ಸುನೀಲ್, ನಿಖಿಲ್ ಇತರರು ಇದ್ದರು.