JANANUDI.COM NETWORK

ವೇಣೂರು,ಫೆ.19; ಇಲ್ಲಿಯ ಕತ್ತೋಡಿಬೈಲು ನಿವಾಸಿ ವಿಠಲ ಆಚಾರ್ಯ ಅವರ ಪುತ್ರಿಯಾದ ಕುಮಾರಿ ಸೌಮ್ಯಾ (19) ಅವರು ಮನೆಯ ಪಕ್ಕಾಸಿಗೆ ಚೂಡಿದಾರ ಶಾಲು ಬಿಗಿದುಕೊಂಡು ಇಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳ್ತಂಗಡಿ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿರುವ ಸೌಮ್ಯ ಲಾಕ್‌ಡೌನ್ ಬಳಿಕ ತರಗತಿಗೆ ತೆರಳದೆ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗುತ್ತದೆ. ಇಂದು ಬೆಳಿಗ್ಗೆ ಎದ್ದು ಉಪಹಾರ ಸೇವಿಸಿದ ಬಳಿಕ ಅವಳು ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯ ಮೇಲ್ಛಾವಣಿಯನ್ನು ಗಮನಿಸಿದಾಗ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೇಣೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತು ಮುಂದಿನತನಿಕೆಯನ್ನು ಕೈಗೆತ್ತುಕೊಂಡಿದ್ದಾರೆ.