

ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು. ರಥೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು, ಬಿರುಬಿಸಿಲು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮಸ್ಥರಿಂದ ಪಾನಕ ಸೇವೆ ನೀಡಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಶಿವಾರೆಡ್ಡಿ, ಉಮಾದೇವಿ, ಕೆ.ಎಚ್.ಕೃಷ್ಣಪ್ಪ, ಜಯಣ್ಣ, ಶಿವಾನಂದ, ವೆಂಕಟೇಶ್, ಅಶೋಕ್, ರೆಡ್ಡಪ್ಪ, ಶ್ರೀನಿವಾಸ್, ಅರ್ಜುನ್, ರಂಗಸ್ವಾಮಿಶೆಟ್ಟಿ ಇದ್ದರು.