ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : – ಸಾಲ ಮನ್ನಾ ಯೋಜನೆಯ ಪರಿಕಲ್ಪನೆಯೇ ಇಲ್ಲದೇ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಡಿಸಿಸಿ ಬ್ಯಾಂಕ್ ವಿರುದ್ಧ ಸುಳ್ಳು ಆರೋಪ ಮಾಡದಿರಿ , ಫಲಾನುಭವಿ ರೈತರ ಪಟ್ಟಿ ಕಳುಹಿಸಿಕೊಡುವ ಎರಡೂ ಜಿಲ್ಲೆಯಲ್ಲಿ ಓಡಾಡಿ ಸತ್ಯಾಂಶ ತಿಳಿದುಕೊಳ್ಳಿ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರಡ್ಡಿ ಅವರಿಗೆ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು . ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು , ವೆಂಕಟಶಿವಾರೆಡ್ಡಿಯವರು ಸಾಲ ಮನ್ನಾ ಯೋಜನೆಯಲ್ಲಿ ಭ್ರಷ್ಟಾಚಾರ , ಗೌನಪಲ್ಲಿ ಸೊಸೈಟಿಯಲ್ಲಿ ೪ ಕೋಟಿ ಅವ್ಯವಹಾರ ನಡೆದಿದೆ ಎಂದು ಮಾಡಿರುವ ಆರೋಪಗಳಿಗೆ ಈ ಉತ್ತರ ನೀಡಿದರು .
ಗೌನಪಲ್ಲಿ ಸೊಸೈಟಿ ವ್ಯಾಪ್ತಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ ಸಾಲ ಮನ್ನಾದಿಂದ ೧೦೪ ರೈತರಿಗೆ ೯೫.೭೦ ಲಕ್ಷ ರೂ ಮನ್ನಾ ಆಗಿದ , ಸಿದ್ದರಾಮಯ್ಯ ಅವಧಿಯಲ್ಲಿ ಮನ್ನಾದಿಂದ ೧೯೨ ರೈತರಿಗೆ ೮೦.೨೦ ಲಕ್ಷ ರೂ ೧೭೫.೯೦ ಲಕ್ಷ ರೂ ಮನ್ನಾ ಆಗಿದೆ ಎಂದರು .
ಸಾಲ ಮನ್ನಾ ಫಲಾನುಭವಿಗಳ ಪಟ್ಟಿ ಡಿಸಿಸಿ ಬ್ಯಾಂಕ್ ಅಫೆಕ್ಸ್ ಬ್ಯಾಂಕ್ಗೆ ಕಳುಹಿಸಿಕೊಡುತ್ತದೆ , ಅಲ್ಲಿಂದ ಅದು ಸರ್ಕಾರಕ್ಕೆ ಹೋಗುತ್ತದೆ , ಸಾಲ ಮನ್ನಾ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುತ್ತದೆ , ಇಲ್ಲಿ ಯಾರ ಕೈವಾಡವೂ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು .
ಅವಿಭಜಿತ ಜಿಲ್ಲೆಯಲ್ಲಿ ಯಾವೊಬ್ಬ ಸಾಲ ಮನ್ನಾ ಫಲಾನುಭವಿ ರೈತರು ಒಂದು ರೂಪಾಯಿ ಅನ್ಯಾಯವಾಗಿದೆ ಎಂದು ಹೇಳಿಲ್ಲ , ಇದರ ನಡುವೆ ತಮ್ಮದೇನು ಉಸಾಬರಿ ಎಂದು ವ್ಯಂಗ್ಯವಾಡಿದರು . ಗೌನಪಲ್ಲಿ ಸೊಸೈಟಿ ವ್ಯಾಪ್ತಿಯಲ್ಲಿ ಸಾಲ ನೀಡಿರೋದೇ ೨.೮೭ ಕೋಟಿ ರೂ ಆದರೆ ಅಲ್ಲಿ ೪ ಕೋಟಿ ಅವ್ಯವಹಾರವಾಗಿದೆ ಎಂದು ಹೇಳುವ ಮಾಜಿ ಶಾಸಕರಿಗೆ ಅನುಭವ , ಜ್ಞಾನದ ಕೊರತೆ ಇದ್ದಂತಿದೆ ಎಂದರು .
ದಾಖಲೆ ಕಳುಹಿಸುವ ಪರಿಶೀಲಿಸಿ ಮಾತಾಡಲಿ
ಮಾಜಿ ಶಾಸಕರು ಮಾಡಿರುವ ಆರೋಪಗಳಿಗೆ ದಾಖಲೆ ಕಳುಹಿಸುವ , ಸಾಲ ಮನ್ನಾ ಪ್ರಯೋಜನ ಪಡೆದ ರೈತರ ಪಟ್ಟಿಯನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸುತ್ತೇನೆ , ಅವರೇ ರೈತರ ಮನೆಗೆ ಹೋಗಿ ಸತ್ಯಾಂಶ ಅರಿತು ಆನಂತರ ಮಾಧ್ಯಮದವರನ್ನು ಕರೆದು ಎಲ್ಲೆಲ್ಲಿ ಅವ್ಯವಹಾರವಾಗಿದೆ ಎಂದು ತಿಳಿಸಲಿ , ತಪ್ಪಾಗಿರುವ ದಾಖಲೆಗಳಿದ್ದರೆ ಸಿಬಿಐಗೂ ನೀಡಲಿ ಎಂದು ಸಲಹೆ ನೀಡಿದರು . ಸೊಸೈಟಿಗಳ ನಿರ್ವಹಣೆ ಹೊಣೆ ಸಹಕಾರ ಇಲಾಖೆ ಉಪನಿಬಂಧಕರ ವ್ಯಾಪ್ತಿಗೆ ಬರುತ್ತದೆ , ಡಿಸಿಸಿ ಬ್ಯಾಂಕಿಗೆ ಸಂಬಂಧವಿಲ್ಲ , ಅವರು ಹೇಳಿರುವಂತೆ ೨೧೬ ಸೊಸೈಟಿಗಳಿಲ್ಲ , ಚಾಲ್ತಿಯಲ್ಲಿರೋದು ೧೮೫ ಮಾತ್ರ ಅಲ್ಲಿನ ಸಾಲ ಮನ್ನಾ ರೈತರ ಪಟ್ಟಿಯೂ ಕಳುಹಿಸುವ , ಪರಿಶೀಲಿಸಿ ತಪ್ಪಾಗಿರುವ ದಾಖಲೆ ಇದ್ದರೆ ಉಪನಿಬಂಧಕರಿಗೆ ದೂರು ನೀಡಿ ಕ್ರಮಕೈಗೊಳ್ಳಲು ಆಗ್ರಹಿಸಲಿ ಎಂದು ಸೂಚಿಸಿದರು . ಎಸ್ಎನ್ ಐಟೆಕ್ ಫೌಲ್ವಿ , ದತ್ತ ಸಾಯಿ ಮೌಲ್ವಿ ಫಾರಂ , ರಮೇಶ್ ಕುಮಾರ್ ಅವರಿಗೆ ಫೌ ಫಾರಂಗಾಗಿ ಬ್ಯಾಂಕ್ ಸುಮಾರು ಎರಡು ಪಟ್ಟು ಭದ್ರತೆ ಇಟ್ಟುಕೊಂಡೇ ಸಾಲ ನೀಡಿದ್ದೇವೆ , ಕಂತುಗಳ ಪಾವತಿಯೂ ಸಮರ್ಪಕವಾಗಿದೆ ಎಂದರು . * ೭ ಸ್ಟಾರ್ , ಬಳಕೆದಾರರ ಸಂಘ , ಶಾಸಕ ಶ್ರೀನಿವಾಸಗೌಡರಿಗೆ ಮತ್ತು ಭುವನ್ ಎಂಟರ್ಪ್ರೈಸಸ್ಗೆ ೫ ಕೋಟಿ ಬ್ಯುಸಿನೆಸ್ಗಾಗಿ ಸಾಲ ನೀಡಿಕೆ ಎಲ್ಲವನ್ನು ಬ್ಯಾಂಕ್ ಉಳಿಸುವ ಉದ್ದೇಶದಿಂದ ಪಾರದರ್ಶಕವಾಗಿಯೇ ಮಾಡಿದ್ದೇವೆ , ಬ್ಯಾಂಕಿಗೆ ಕೋಟಿಗಟ್ಟಲೆ ಬಡ್ಡಿ ಹಣ ಹರಿದು ಬರುತ್ತಿದೆ ಎಂದು ತಿಳಿಸಿ , ಸಾಲ ವಿತರಣೆ ದಾಖಲೆಯನ್ನೂ ಕಳುಹಿಸುವ ಪರಿಶೀಲಿಸಿ ಮಾತನಾಡಿ ಎಂದರು . ಡಿಸಿಸಿ ಬ್ಯಾಂಕಿನವರು ಸಾಲಕ್ಕೆ ಲಂಚ ಪಡೆದಿದ್ದಾರೆ ಎಂದು ಎಲ್ಲಾದರೂ ಮಹಿಳೆಯರಾಗಲಿ , ರೈತರಾಗಲಿ ಹೋರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು .
ನಾನು ಹಿಂದೆ ೨೦೦೮ ಮತ್ತು ೨೦೧೩ ರಲ್ಲಿ ನಿಮ್ಮ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ , ಆದರೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಮ್ಮ ಹಾಗೂ ಶ್ರೀನಿವಾಸಗೌಡರ ಅನುಮತಿ ಪಡೆದೇ ಕಣಕ್ಕಿಳಿದಿದ್ದರೂ , ನನ್ನ ವಿರುದ್ಧ ಕುರಪಲ್ಲಿ ವಂಕಟರಡ್ಡಿರನ್ನು ಕಣಕ್ಕಿಳಿಸಿದ್ದೀರಿ ಎಂದು ಜ್ಞಾಪಿಸಿದರು .
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿ ಶೇಷಾಪುರ ಗೋವಿಂದಗೌಡರನ್ನು ಕಣದಿಂದ ಹಿಂದೆ ಸರಿಸಿತು ಆದರೆ ನೀವು ಮಾಡಿದ್ದೇನು ? ಈಗ ನಾನು ಗೆಲ್ಲಿಸಿದ ಎಂದು ಹೇಳಿಕೊಳ್ಳುತ್ತಿದ್ದೀರಾ ಇದು ನಿಮಗೆ ಶೋಭೆ ತರಲ್ಲ ಎಂದರು .
ಶ್ರೀನಿವಾಸಪುರಕ್ಕೆ ೫೦೦ ಕೋಟಿ ಕೆಜಿಎಫ್ಗೆ ೪೦೦ ಕೋಟಿ ಸಾಲ ನೀಡಿದ್ದೇವೆ ಎಂದು ಸಚಿವ ಸೋಮಶೇಖ ಮಾಡಿರುವ ಆರೋಪ ಸುಳ್ಳು ಸಾಲ ನೀಡಿರುವುದು ಕ್ರಮವಾಗಿ ೭೦ ಕೋ ಮತ್ತು ೪೦ ಕೋಟಿ ಮಾತ್ರ ಎಂದು ತಿಳಿಸಿ , ಯಾವುದೇ ತಾಲ್ಲೂಕಿಗೆ ಸಾಲ ನೀಡಿಕೆಯಲ್ಲಿ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು .
ರಾಜಕೀಯ ಸ್ವಾರ್ಥಕ್ಕಾಗಿ ಮಾಡುವ ಆರೋಪಗಳು ನಮಗೆ ಶಕ್ತಿ ತುಂಬುತ್ತಿವ , ಮತ್ತಷ್ಟು ರೈತರು , ಮಹಿಳೆಯರ ನೆರವಿಗೆ ನಿಲ್ಲುವ ಆತ್ಮಸ್ಥೆರ್ಯ ಗಟ್ಟಿಗೊಳಿಸಿವೆ ಎಂದು ತಿಳಿಸಿ , ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದು ಹಾರೈಸಿದರು . ಸುದ್ದಿಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್ಕುಮಾರ್ , ನೀಲಕಂಠೇಗೌಡ , ನಾಗನಾಳ ಸೋಮಣ್ಣ ಕೆ.ವಿ.ದಯಾನಂದ್ , ವೆಂಕಟರಡ್ಡಿ , ಗೋವಿಂದರಾಜು ಉಪಸ್ಥಿತರಿದ್ದರು .