ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು, ಮೂಡುಬೆಳ್ಳೆಯಲ್ಲಿ ವೆಲೆಡಿಕ್ಶನ್ ಬ್ಯಾಷ್ 2022 ಕಾರ್ಯಕ್ರಮ.

JANANUDI.COM NETWORK


ಮೂಡುಬೆಳ್ಳೆ, ಮಾ. 30:  “ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದ್ದು .ನಮ್ಮ ಸಂಸ್ಥೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಏಳಿಗೆಗೆ ಸರ್ವ ಪ್ರಯತ್ನವನ್ನು ಮಾಡಿದ್ದಾರೆ .ಉತ್ತಮ ಶಿಕ್ಷಣ, ಉತ್ತಮ ವಾತಾವರಣ ಮತ್ತು ಉತ್ತಮ ಕಲಿಕಾ ಪರಿಸರವನ್ನು ನಿರ್ಮಿಸುವುದರ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಲು ತಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ವಿದ್ಯಾರ್ಥಿಗಳು ಹೆತ್ತವರ ಆಶಯ ಮತ್ತು ಗುರುಗಳ ಆಶೀರ್ವಾದವನ್ನು ಪಡೆದು ಯಶಸ್ಸಿನ ಶಿಖರವನ್ನೇರಲಿ. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿ ದೇಶದ ಸತ್ಪ್ರಜೆಗಳಾಗಲಿ” ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜಾರ್ಜ್ ಡಿಸೋಜರವರು 2022ರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಕರು ಮತ್ತು ಉತ್ತಮ ಕಾರ್ಯ ನಿರ್ವಾಹಕರು ಆಗಿರುವ ಶ್ರೀ ಆಲ್ವಿನ್ ದಾಂತಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಕುರಿತು ಮಾರ್ಗದರ್ಶನವನ್ನು ನೀಡಿದರು. ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಪ್ರಮಿತ ವೀರ ಡಿಸೋಜ ವಂದಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಸ್ವಾತಿ ನಿರೂಪಿಸಿದರು

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಸ್ಥೆಯ ಸ್ಕಾಲರ್ ಶಿಪ್ ನಿಧಿಗೆ ಧನಸಹಾಯವನ್ನು ನೀಡಿದರು . ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಲಿಜ್ವಿಟಾ ಡಿಸೋಜ, ದೀಪ ಕುಮಾರಿ ,ವರ್ಷಿಣಿ ಮತ್ತು ವಿದ್ಯಾರ್ಥಿ ನಾಯಕ ದಿಲೀಪ್ ಕುಮಾರ್ ತಮ್ಮ ಅನಿಸಿಕೆಗಳನ್ನು ಹೇಳಿದರು. ದೈಹಿಕ ಶಿಕ್ಷಕರಾದ ಜೋಸೆಫ್ ಡಿಸೋಜರವರು ಅತಿಥಿಗಳ ಪರಿಚಯವನ್ನು ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಶಿಕ್ಷಕರು ವಿದ್ಯಾಭಿಮಾನಿಗಳು ಶಿಕ್ಷಕ ಶಿಕ್ಷಕೇತರ ವೃಂದದವರು ಹಾಜರಿದ್ದರು.