JANANUDI NEWS NETWORK (EDITOR : BERNARD D’COSTA)
ಬೆಂಗಳೂರು: ಭಾರಿ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಮತ್ತೆ ಭೂಕುಸಿತವುಡಾಗಿದ್ದು, ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ಉಡುಪಿ ಕುಂದಾಪುರ ಈ ಮಾರ್ಗದ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿಘಾಟಿನ ದೋಣಿಗಲ್ ಸಮೀಷ ಭೂ ಕುಸಿತವುಂಟಾಗಿದೆ. ಧಾರಾಕಾ ಮಳೆಯಿಂದಾಗಿ ಇದೇ ಭಾಗದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಭೂಕುಸಿತ ಸಂಭವಿಸಿತ್ತು. ಮತ್ತಷ್ಟು ಭೂಕುಸಿತವಾಗದಂತೆ. ಮರಳು ಚೀಲಗಳನ್ನು ಹಾಕಲಾಗಿತ್ತು. ಆದರೆ ಇಂದು ದೋಣಿಗಲ್ ನಲ್ಲಿ ಮತ್ತೆ ಭೂಕುಸಿತವುಂಟಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ದೋಣಿಗಲ್ ಬಳಿ ಭೂಕುಸಿತವುಟಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಧ್ಯ ಲಘುವಾನಗಳ ಸಂಚಾರಕ್ಕೆ ಅವಕಾಶ ನೀಡಲಿದ್ದು, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕಳೆದ ವರ್ಷ ಶಿರಾಡಿಘಾಟ್ ನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಒಂದು ತಿಂಗಳ ಕಾಲ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಶಿರಾಡಿಘಾಟಿನಲ್ಲಿ ಭೂ ಕುಸಿತವುಂಟಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.