ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ,ಜ.29: ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ವಾಣಿಜ್ಯ ವಾಹನ ಚಾಲಕರಿಗಾಗಿ ಜಿಲ್ಲೆಯಾದ್ಯಂತ ಪುನಶ್ಚೇತನ ಕಾರ್ಯಾಗಾರ ಆಯೋಜಿಸಬೇಕೆಂದು ಕರ್ನಾಟಕ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್ ಹೇಳಿದರು.
ನಗರದ ಆರ್‍ಟಿಒ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಾಗಾರದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಮಂಡಳಿಯ ಪ್ರಯೋಜನಗಳ ಕುರಿತಂತೆ ಚಾಲಕರಲ್ಲಿ ಅರಿವು ಮೂಡಿಸಬಹುದಾಗಿದೆ, ಆದ್ದರಿಂದ ಕಾರ್ಯಾಗಾರಗಳನ್ನು ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅರ್‍ಟಿಒ ಆರ್.ಚಂದ್ರಶೇಖರ್ ಮಾತನಾಡಿ, ಯಾವುದೇ ವಾಹನ ಚಲಾಯಿಸುವ ಚಾಲಕ ಮನಸ್ಸು ಶಾಂತಿ ಸಮಾಧಾನ ಚಿತ್ತದಲ್ಲಿರಬೇಕು, ವಾಹನ ಸುಸ್ಥಿತಿಯಲ್ಲಿರಬೇಕು ಹಾಗೂ ವಾಹನದ ದಾಖಲಾತಿಗಳು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೋಲಾರ ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್ ಮಾತನಾಡಿ, ಯುವಕ ಯುವತಿಯರು ಬಹು ಬೇಗ ದ್ವಿಚಕ್ರ ವಾಹನ ಕಲಿಯುತ್ತಿರುವುದರಿಂದ ವಾಹನ ಪರವಾನಗಿ ಪಡೆಯುವ ಮಿತಿಯನ್ನು 19 ವರ್ಷಗಳಿಂದ 16 ವರ್ಷಕ್ಕಿಳಿಸಬೇಕೆಂದು ಸಲಹೆ ನೀಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಅಪಘಾತವಾಗಿಸುವುದು, ದುಬಾರಿ ದಂಡ ಪಾವತಿಸಿ ಬೀದಿ ಪಾಲಾಗುವ ಬದಲು ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್ ಮಾತನಾಡಿ, ಕೋಲಾರ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆ ಕಾಪಾಡಲು ರೋಟರಿ ಸಂಸ್ಥೆಯಿಂದ ರಿ-É್ಲಕ್ಟರ್ಸ್ ಅಳವಡಿಸುವುದು ಹಾಗೂ ಚಾಲಕರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವುದಾಗಿ ಪ್ರಕಟಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಇತರೇ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ನಿಯಮಿತ ಅವ„ಗೆ ತಾತ್ಕಾಲಿಕವಾಗಿ ವಾಹನ ತೆರಿಗೆ ಪಾವತಿಸಿ ಸಂಚರಿಸುವ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆಯೆಂದರು.
ಜಿಲ್ಲಾ ಕಾರ್ಮಿಕ ಅ„ಕಾರಿ ಶ್ರೀಕಾಂತ್ ಪಾಟೀಲ್ ಮಾತನಾಡಿ, ಸಾಮಾಜಿಕ ಭದ್ರತಾ ಮಂಡಳಿಗೆ ಚಾಲಕ, ನಿರ್ವಾಹಕ ಕ್ಲೀನರ್‍ಗಳು ನೋಂದಣಿಯಾಗಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಅ„ಕಾರಿಗಳಾದ ಶ್ರೀನಿವಾಸ್, ವೇಣುಗೋಪಾಲರೆಡ್ಡಿ, ಆಟೋ ನಾರಾಯಣಸ್ವಾಮಿ, ಮಂಜುನಾಥ್, ವೇಣು, ಬಸ್ ಮಾಲೀಕರ ಸಂಘದ ಶರವಣ, ಚಿದಂಬರಂ, ಜಮೀರ್ ಅಹಮದ್ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಾಹನ ಚಾಲಕರಿಗೆ ಸಾಮಾಜಿಕ ಭದ್ರತಾ ಮಂಡಳಿಯ ಸದಸ್ಯತ್ವ ಅರ್ಜಿಗಳನ್ನು ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕೋಲಾರ ಆರ್‍ಟಿಒ ಕಚೇರಿಯಿಂದ ಇಂದೇ ವರ್ಗಾವಣೆಯಾಗುತ್ತಿರುವ ಆರ್‍ಟಿಒ ಆರ್.ಚಂದ್ರಶೇಖರ್‍ರಿಗೆ ವಿವಿಧ ಸಂಸ್ಥೆಗಳಿಂದ ಸನ್ಮಾನ ಮಾಡಿ ಬೀಳ್ಕೊಡಲಾಯಿತು.ಹುತಾತ್ಮ ದಿನಾಚರಣೆ ಅಂಗವಾಗಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಆರ್‍ಟಿಒ ಕಚೇರಿ ಸೂಪರಿಟೆಂಡೆಂಟ್ ಬಂಡಿಗಣಿ ಕಾರ್ಯಕ್ರಮ ನಿರ್ವಹಿಸಿದರು.
