ಶ್ರೀನಿವಾಸಪುರ : ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಲಾ ಮಾತನಾಡಿ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ಹಾಗೂ ಯಾರಿಗೂ ತೊಂದರೆಯಾಗದಂತೆ ರಸ್ತೆಗಳಲ್ಲಿ ಧೂಳು ಏಳದಂತೆ ನೀರಿನ ಟ್ಯಾಂಕರ್ಗಳಿಂದ ರಸ್ತೆಗಳಿಗೆ ನೀರನ್ನು ಹಾಯಿಸಲಾಗುತ್ತಿದೆ ಹಾಗೂ ರಸ್ತೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟಿನಲ್ಲಿ ತೊಡಗಿರುವ ಎಲ್ಲಾ ರೈತರುಗಳಿಗೆ, ಮಂಡಿಗಳಲ್ಲಿ ಕಾರ್ಯನಿರ್ವಹಿಸುವ ಹಮಾಲುರುಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ಘಟಕದ ವ್ಯವಸ್ಥೆಯನ್ನು ಮಾಡಿದ್ದು, ಮತ್ತು ಪುರುಷರ ಹಾಗೂ ಮಹಿಳೆಯರ ಶೌಚಾಲಯಗಳು ಹಾಗೂ ಸ್ನಾನದ ಗೃಹಗಳ ವ್ಯವಸ್ಥೆಯನ್ನು ಸಿದ್ದವಾಗಿದ್ದು, ಎಲ್ಲಾ ರೈತರು,ಹಮಾಲರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳ ವ್ಯವಸ್ಥೆ ಮಾಡಲಾಗಿದೆ.
ಪ್ರಾಂಗಣದಲ್ಲಿ ಪ್ರತಿದಿನ ಮಾವು ಟಮೋಟೋ ಹಾಗೂ ಇತರ ತ್ಯಾಜ್ಯವನ್ನು ಸ್ವಚ್ಚತಾ ಗುತ್ತಿಗೆದಾರರಿಂದ ಸ್ವಚ್ಚಗೊಳಿಸಿ, ವಿಲೇ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಾವಿನ ಸುಗ್ಗಿಯ ಅವಧಿಯಲ್ಲಿ ತ್ಯಾಜ್ಯವನ್ನು ಕಸದ ಬುಟ್ಟಿಗಳಲ್ಲಿ ತುಂಬಿಸಿ ವಿಲೇವಾರಿ ಸಮಯದಲ್ಲಿ ಟ್ರಾಕ್ಟರ್ಗಳಲ್ಲಿ ಹಾಕುವಂತೆ ಸಭೆಗಳಲ್ಲಿ ತಿಳಿಸಿದ್ದರೂ ಕೆಲವರು ಪ್ರಾಂಗಣದ ವಿವಿಧ ಕಡೆಗಳಲ್ಲಿ ತ್ಯಾಜ್ಯವನ್ನು ಹಾಕುತ್ತಿದ್ದು ಸಮಿತಿ ಗಮನಕ್ಕೆ ಬಂದಿದ್ದು ಅವುಗಳನ್ನು ತಕ್ಷಣದಲ್ಲೇ ಸ್ವಚ್ಚಗೊಳಿಸಲಾಗುತ್ತಿದೆ.
ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರುಗಳಿಗೆ ಅನುಕೂಲವಾಗುಂತೆ ಶ್ರೀನಿವಾಸಪುರ ರಸ್ತೆ- ಚಿಂತಾಮಣಿ ರಸ್ತೆ ಹಾಗೂ ಪ್ರಾಂಗಣಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ರಸ್ತೆಯನ್ನು ಜೆಲ್ಲಿ ಮತ್ತು ಗ್ರಾವೇಲ್ ರಸ್ತೆಯನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಹಾಗೂ ಶಾಸಕರ ಅನುಮತಿ ಮೇರೆಗೆ ಅಭಿವೃದ್ಧಿಪಡಿಸಲಾಗಿರುತ್ತದೆ ಎಂದು ಹೇಳಿದರು.