

ಕುಂದಾಪುರ,ಜು. 9: ಕಥೊಲಿಕ್ ಸಭಾ ಬಸ್ರೂರು ಘಟಕ ಹಾಗು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ) ಬಸ್ರೂರು ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಬಸ್ರೂರು ಪಂಚಾಯತ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು,ಮುಖ್ಯ ಅತಿಥಿಯಾಗಿ ಬಸ್ರೂರು ಪಂಚಾಯತ್ ಅಧ್ಯಕ್ಷರಾದ ಬಿ. ದಿನಕರ ಶೆಟ್ಟಿಯವರು ಉಪಸ್ಥಿತರಿದ್ದರು ಎರಡೂ ಸಂಸ್ಥೆಯ ಅಧ್ಯಕ್ಷರು ಗಿಡವನ್ನು ಮುಖ್ಯ ಅತಿಥಿಯವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಿ. ದಿನಕರ ಶೆಟ್ಟಿಯವರು ಮಾತನಾಡಿ ವನಮಹೋತ್ಸವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು, ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಥೋಲಿಕ ಸಭಾ ಬಸ್ರೂರು ಘಟಕದ ಅಧ್ಯಕ್ಷರಾದ ವಿಕ್ರಮ್ ಡಿಸೋಜ, ಬಸ್ರೂರು ಸ್ಪೋರ್ಟ್ಸ್ ಕ್ಲಬ್‌ನ ಗೌರವಧ್ಯಕ್ಷರಾದ ಅಜೀಜ್ ರವರು ಉಪಸ್ಥಿತರಿದ್ದರು, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷರಾದ ಫ್ಲೈವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಕೆಥೋಲಿಕ್ ಸಭಾ ಕಾರ್ಯದರ್ಶಿ ಮರಿಯಾ ಡಿಸಿಲ್ವಾ ವಂದಿಸಿದರು. ಎರಡೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಅವರಿಗೆ ಗಿಡಗಳನ್ನು ವಿತರಿಸಲಾಯಿತು.



