

ಕುಂದಾಪುರ,ಜು. 9: ಇಂದು ಹೋಲಿ ರೋಸರಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ ವನಮಹೋತ್ಸವ ಆಚರಣೆ ನಡೆಯಿತು .ಉದ್ಘಾಟನೆ ಯನ್ನು ನೆರವೇರಿಸಿದ ಅತಿ ವಂದನೀಯ ಫಾ. ಸ್ಟ್ಯಾನಿ ತಾವ್ರೊ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ , ವರ್ಷಂಪ್ರತಿ ಮನೆಯಲ್ಲಿ ಒಂದು ಗಿಡವನ್ನು ನೆಟ್ಟು ಸಂರಕ್ಷಿಸಿದರೆ, ಭವಿಷ್ಯದಲ್ಲಿ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದರು.
ಮನೆಗೊಂದು ಉತ್ತಮ ತಳಿಯ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರುಗಳಾದ ಅಶ್ವಿನ್ ಅರಾನ್ನಾ, ಪಾಲನ ಮಂಡಳಿಯ ಉಪಾಧ್ಯಕ್ಷೆಯಾದ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮ ಡಿಕುನ್ನಾ, ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯದರ್ಶಿ ವಾಲ್ಟರ್ ಡಿಸೋಜಾ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಅಲ್ಮೇಡಾ ಸ್ವಾಗತಿಸಿ ವಿತರಿಸಿದ ಗಿಡಗಳನ್ನು ಉತ್ತಮವಾಗಿ ಪೋಷಿಸಿದವರಿಗೆ ಮುಂದಿನ ವರ್ಷ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸರಕಾರದಿಂದ ಉಚಿತವಾಗಿ ಗಿಡಗಳನ್ನು ನೀಡಲು ಸಹಕರಿಸಿದ ಜಿಲ್ಲಾ ಸಹಾಯಕ ಅರಣ್ಯ ಆಯುಕ್ತರಾದ ಶ್ರೀ ಕ್ಲಿಫರ್ಡ್ ಲೋಬೊ ರವರನ್ನು ಕಾರ್ಯಕ್ರಮ ಸಂಚಾಲಕಿ ಆಶಾ ಕರ್ವಾಲ್ಲೊ ಅಭಿನಂದಿಸಿ ,ಕಾರ್ಯಕ್ರಮವನ್ನು ನಿರೂಪಿಸಿದರು.





