ಕುಂದಾಪುರ ವಲಯದ ಕಥೋಲಿಕ್ ಸಭಾದಿಂದ ವನಮಹೋತ್ಸವ, ಎಲ್ಲಾ ಘಟಕಗಳಲ್ಲಿ ವನಮಹೋತ್ಸವ : ಪಡುಕೋಣೆಯಲ್ಲಿ ಚಾಲನೆ

JANANUDI.COM NETWORK                BERNARAD DCOSTA

ಕುಂದಾಪುರ:  ಜುಲೈ 3ರಂದು ಕಥೋಲಿಕ್ ಸಭಾ  ಕುಂದಾಪುರ ವಲಯದ ಎಲ್ಲಾ 12 ಚರ್ಚ್ ಗಳಲ್ಲಿ  ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಕಥೋಲಿಕ್ ಸಭಾ ಪಡುಕೋಣೆ ಘಟಕದಲ್ಲಿ ಸಾಮೂಹಿಕ ವಾಗಿ ಚಾಲನೆ ನೀಡಲಾಯಿತು.

ಕುಂದಾಪುರ ವಲಯ ಕಥೋಲಿಕ್ ಸಭಾ ಅಧ್ಯಕ್ಷೆ ಶಾಂತಿ ಪಿರೇರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಡುಕೋಣೆ ಚರ್ಚಿನ ಧರ್ಮಗುರು  ವಂದನಿಯ ಫ್ರಾನ್ಸಿಸ್ ಕರ್ನೆಲಿಯೋ ಕಥೋಲಿಕ್ ಸಭಾ ಅಧ್ಯಕ್ಷರಿಗೆ ಹಾಗೂ ವೇದಿಕೆಯಲ್ಲಿದ್ದ ಅತಿಥಿ ಗಳಿಗೆ ಹಣ್ಣಿನ ಗಿಡಗಳನ್ನು ನೀಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚರ್ಚಿನ ಪ್ರತಿ ಕುಟುಂಬಕ್ಕೆ ಒಂದೊಂದು ಹಣ್ಣಿನ ಗಿಡವನ್ನು ನೀಡಲಾಯಿತು.ಒಟ್ಟು 200 ಹಣ್ಣಿನ ಗಿಡಗಳನ್ನು ಹಾಜರಿದ್ದವರಿಗೆ ಹಂಚಲಾಯಿತು.        

     ಈ ಸಾಮೂಹಿಕ ವನಮಹೋತ್ಸವ ಕಾರ್ಯಕ್ರಮದಲ್ಲಿ  ಕುಂದಾಪುರ ವಲಯದ 12 ಚರ್ಚ್ ಗಳಿಂದ ಒಟ್ಟು 843 ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಕುಂದಾಪುರ ವಲಯದ ನಿಕಟ ಪೂರ್ವ ಅಧ್ಯಕ್ಷೆ ಮೇಬಲ್ ಡಿಸೋಜಾ, ಮಾಜಿ ಅಧ್ಯಕ್ಷರಾದ ಎಲ್ರೋಯ್ ಕಿರನ್ ಕ್ರಾಸ್ಟೊ, ಹೆರಿಕ್ ಗೊನ್ಸಲ್ವಿಸ್, ಮೈಕಲ್ ಪಿಂಟೋ, ವಲಯ ನಿಯೋಜಿತ ಅಧ್ಯಕ್ಷ ವಿಲ್ಸನ್ ಅಲ್ಮೆಡ, ಪಡುಕೋಣೆ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಪ್ರಭು ಕೆನೆಡಿ ಪಿರೇರಾ, ಚರ್ಚಿನ ಪರಿಸರ ಆಯೋಗದ ಸಂಚಾಲಕರಾದ ಸ್ಟೀವನ್ ಡಿಸೋಜಾ, ಘಟಕದ ಮಾರ್ಗದರ್ಶಿ ರೂಫಸ್ ಬರೆಟ್ಟೋ, ಸ್ತ್ರೀ ಸಂಘಟನೆ ಅಧ್ಯಕ್ಷೆ ನಿರ್ಮಲ ಡಿಸೋಜಾ, ಸಿಸ್ಟರ್ ಮರ್ಸಿ ಮತ್ತಿತರರು ಉಪಸ್ಥಿತರಿದ್ದರು.

       ಕಥೋಲಿಕ್ ಸಭಾ ಪಡುಕೋಣೆ ಘಟಕ ಅಧ್ಯಕ್ಷ ಸಿಗಫ್ರೆಡ್ ವಾಜ್ ಸ್ವಾಗತಿಸಿದರು .ಕಾರ್ಯದರ್ಶಿ ಫಿಲೋಮೇನಾ ಡಿಸೋಜಾ  ವಂದಿಸಿದರು. ವಿನಯ್ ಆಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.