ಕಥೊಲಿಕ್ ಸಭಾ ಮೌಂಟ್ ರೋಜರಿ ಘಟಕವು ಜುಲಾಯ್ 9 ತಾರೀಕು ಬೆಳಿಗ್ಗೆ 9.30ಗೆ ಪರಿಸರ, ಸಾಮಜಿಕ ಅಭಿವ್ರದ್ದಿ ಮತ್ತು ಯುವ ಆಯೋಗಗಳನ್ನು ಒಗ್ಗೂಡಿಸಿ ದೇವಾಲಯ ವಠಾರದಲ್ಲಿ ಫಲ ಕೊಡುವ ಮತ್ತು ಪುಷ್ಪಗಳ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಸಂಭ್ರಮಿಸಿತು. ಚರ್ಚಿನ ಧರ್ಮಗುರುಗಳು ಫಾ| ಡೊ| ರೊಕ್ ಡಿಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷ ಲೂಕ್ ಡಿಸೋಜ, ರೋಜಿ ಕ್ವಾಡ್ರಸ್ ಕ. ಸಭಾ ಘಟಕ ಅಧ್ಯಕ್ಷರು, ಕಾರ್ಯದರ್ಶಿ ಜೋರ್ಜ್ ಡಿಸೋಜ ,ಕ. ಸಭಾ ಕೇಂದ್ರ ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ವಲಯ ಮಾಜಿ ಅಧ್ಯಕ್ಷ, ಕಾರ್ಯದರ್ಶಿ, ಹಾಗೂ ಕ. ಸಭಾ ಹುದ್ದೆದಾರರು, ಆಯೋಗ ಸಂಚಾಲಕರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಹತ್ತಿರದ ಗೊರೆಟ್ಟಿ ಧರ್ಮಭಗಿನಿಯರ ಕೊನ್ವೆಂಟ್ ಪರಿಸರದಲ್ಲಿ ಸಿಸ್ಟರ್ ಸುಪೀರಿಯರ್ ಮತ್ತು ಧರ್ಮಭಗಿನಿಯರು ಮತ್ತು ನೊವಿಶಿಯೇಟ್ ಅವರೊಡಗೂಡಿ 10 ಫಲ ಪುಷ್ಪಗಳ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಮುಂದಿನ ದಿನಗಳಲ್ಲಿ 50 ಸಸಿಗಳನ್ನು ಹಂಚುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.