

ಜೇಸಿ ಸಪ್ತಾಹದ 2ನೇ ದಿನದ ಕಾರ್ಯಕ್ರಮದ ಅಂಗವಾಗಿ ಗೋಳಿಕಟ್ಟೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿಯ ಸಹಭಾಗಿತ್ವದಲ್ಲಿ, ನಮ್ಮ ಘಟಕದ ಅಧ್ಯಕ್ಷರಾದ ಜೇಸಿ ವಿನೇಶ್ ಅಮೀನ್ ಇವರ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಮುಖ್ಯ ಅತಿಥಿಯಾಗಿ ಗುರುದುರ್ಗಾ ಮಿತ್ರ ಮಂಡಳಿಯ ಅಧ್ಯಕ್ಷರಾದ ಹರಿಪ್ರಸಾದ್ ನಂದಳಿಕೆ, ಜೇಸಿಐ ಬೆಳ್ಮಣ್ಣಿನ ಪೂರ್ವಧ್ಯಾಕ್ಷರು ಹಾಗೂ ವಲಯಾಧಿಕಾರಿ ಜೇಸಿ ಸರ್ವಜ್ಞ ತಂತ್ರಿ, ಮತ್ತು ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಜಾಯ್ಸ್ ಟೆಲ್ಲಿಸ್, ಮಹಿಳಾ ಮಂಡಳಿಯ ಅಧ್ಯಕ್ಷರಾದ ರೇಷ್ಮಾ ಹರೀಶ್ ಮತ್ತು ಅಂಗನವಾಡಿ ಶಿಕ್ಷಕರಾದ ಸುಶೀಲಾ ಮತ್ತಿತ್ತರು ಉಪಸ್ಥಿತರಿದ್ದರು.





















