ವರದಿ:ಆಲ್ಡ್ರೀನ್ ಡಿಸೋಜಾ,ಕುಂದಾಪುರ
ಕುಂದಾಪುರ, ಜು.18: ಕಥೋಲಿಕ್ ಸಭಾ ಕುಂದಾಪುರ ಘಟಕದಿಂದ ಭಾನುವಾರ ಚರ್ಚ್ ಸಭಾಭವನದಲ್ಲಿ ಅಲೊವೇರಾ ಗೀಡವನ್ನು ನಡುವ ಮೂಲಕ ಮತ್ತು ಚರ್ಚಿನ ಜನರಿಗೆ ಮಾವು, ಪೊಪ್ಪಾಯಿ, ಹಲಸು, ಚಿಕ್ಕು ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವ ಆಚರಣೆ ಆಚರಿಸಲಾಯಿತು. ಧರ್ಮ ಗುರು ಕಥೊಲಿಕ್ ಸಭಾದ ಅದ್ಯಾತ್ಮಿಕ ನಿರ್ದೇಶಕ ವಂ. ಸ್ಟಾನಿ ತಾವ್ರೋ ಈ ಸಂದರ್ಭದಲ್ಲಿ ಮಾತನಾಡಿ ಕಾಡು ನಾಶ ಮಾಡಿ, ಗಿಡ-ಮರಗಳನ್ನು ಕಡಿಯುವುದರಿಂದ ವಾತಾವರಣದಲ್ಲಿ ಆಮ್ಲಜನಕ ಕಡಿಮೆಯಾಗಿದೆ. ಹೀಗಾಗಿ ಹೆಚ್ಚು-ಹೆಚ್ಚು ಗಿಡಗಳನ್ನು ನಾವು ನಮ್ಮ ಮನೆಯಂಗಳದಲ್ಲಿ ನೆಡಬೇಕೆಂದು ಸೂಚಿಸಿದರು.
ಅಧ್ಯಕ್ಷರಾದ ಬರ್ನಾಡ್ ಡಿಕೋಸ್ತಾರ ಅನುಪಸ್ಥಿತಿಯಲ್ಲಿ ಅವರ ಮಾರ್ಗದರ್ಶನದಂತೆ ನಿಯೋಜಿತ ಅಧ್ಯಕ್ಷರಾದ ಜೂಲಿಯೆಟ್ ಪಾಯ್ಸ್,ಅಧ್ಯಕ್ಷತೆಯನ್ನು ವಹಿಸಿದ್ದರು.ಸಹಾಹಯಕ ಧರ್ಮಗುರು ವಂ. ವಿಜಯ್ ಡಿಸೋಜಾ, ಕಾರ್ಯಕ್ರಮದ ಸಂಚಾಲಕ ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ, ಪದಾಧಿಕಾರಿಗಳಾದ, ಶೈಲಾ ಅಲ್ಮೆಡ, ನಿರ್ಮಲ ಡಿಸೋಜಾ, ಪ್ರೇಮ, ವಿಲ್ಸನ್ ಅಲ್ಮೇಡಾ, ವಿನೋದ್ ಕ್ರಾಷ್ಟೋ,ಡಾ. ಸೋನಿ ಡಿಕೋಸ್ಟ ಮತ್ತಿತ್ತರು ಉಪಸ್ಥಿತರಿದ್ದರು.