

ಕುಂದಾಪುರ, ಜು.೧೨: ಪಿಯುಸ್ ನಗರ್ ಚರ್ಚಿನ ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯು ದಿನಾಂಕ 10-7-2023 ರಂದು ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾಲಾ ಮಕ್ಕಳ ಜೊತೆ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಪಿಯುಸ್ ನಗರ್ ಚರ್ಚಿನ ಧರ್ಮಗುರು ಹಾಗೂ ಪಿಯುಸ್ ನಗರ್ ಕೆಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ವಂ| ಆಲ್ಬರ್ಟ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಪಿಯುಸ್ ನಗರ್ ಕೆಥೊಲಿಕ್ ಸಭಾ ಸಂಘಟನೆಯ ಮಾರ್ಗದರ್ಶಕರಾದ ಡಾ| ಸೋನಿ ಡಿಕೋಸ್ತಾ, ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಾಧ್ಯಾಯರಾದ ಸೀತಾರಾಮ್ ಶೆಟ್ಟಿ, ಚರ್ಚಿನ ಉಪಾಧ್ಯಕ್ಷರು ಶ್ರೀ ಜೇಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜ, 20 ಆಯೋಗದ ಸಂಯೋಜಕಿ ಶ್ರೀಮತಿ ಲೀನಾ ತಾವ್ರೊ, ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಅಧ್ಯಕ್ಷರಾದ ಅಲೆಕ್ಸಾಂಡರ್ ಲೂವಿಸ್, ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ, ಚರ್ಚಿನ ಧರ್ಮಗುರುಗಳು ಹಾಗೂ ಡಾಕ್ಟರ್ ಸೋನಿ ಡಿಕೋಸ್ತಾ ಶಾಲಾ ಮುಖ್ಯೋಪದಾಯಕರಿಗೆ ಗಿಡವನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಪರಿಸರದ ಬಗ್ಗೆ ಮಕ್ಕಳಿಗೆ ಜಾಗ್ರತೆ ಮೂಡಿಸಿಸುವ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯಕರು ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಶಾಲಾ ಮಕ್ಕಳಿಗೆ ಗಿಡಗಳನ್ನು ನೀಡಲಾಯಿತು. ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಧನ್ಯವಾದಗಳನ್ನು ಅರ್ಪಿಸಿದರು.



