ಶ್ರೀನಿವಾಸಪುರ : ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಅವಲಕುಪ್ಪ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಸರ್ವೆ ನಂ. 95 ರಲ್ಲಿರುವ 10 ಎಕರೆ ಜಮೀನಿನಲ್ಲಿರುವ ಮಾವಿನ ತೋಟದ ಫಸಲನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಾಲಾವರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಎಸ್ಡಿಎಂಸಿ ಅಧ್ಯಕ್ಷತೆಯಲ್ಲಿ ಬುಧವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಅವಲಕುಪ್ಪ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಸರ್ವೆ ನಂಬರ್ 95ರಲ್ಲಿನ 10 ಎಕರೆ ಜಮೀನಿನ ಮಾವಿನ ತೋಟದ ಫಸಲು ನಿಯಮಾನುಸಾರ ಬಹಿರಂಗ ಹರಾಜಿನಲ್ಲಿ 5 ಲಕ್ಷ 21 ಸಾವಿರಕ್ಕೆ ಅಂತಿಮ ಬೀಟ್ನಲ್ಲಿ ಗ್ರಾಮದ ರಾಮ್ಚರಣ್ ಎಂಬ ಬೀಟ್ದಾರರು ಹರಾಜುನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಹರಾಜಿನಲ್ಲಿ ಸುಮಾರು 18 ಮಂದಿ ಬೀಟ್ ದಾರರು ಭಾಗವಹಿಸಿದ್ದು, ಇವರ ಪೈಕಿ ಶಬ್ಭೀರ್ ಮತ್ತು ಡಿ.ಎನ್.ರವಿಕುಮಾರ್, ಲಕ್ಷ್ಮೀನಾರಾಯಣ ಮತ್ತು ಎ.ಸಿ.ನಾರಾಯಣಸ್ವಾಮಿ ಇವರ ಮಧ್ಯೆ ಬೀಟ್ ಹರಾಜ್ ಸ್ಪರ್ದೆ ನಡೆಯುತ್ತಾ ಬಂದಿದ್ದು, ಅಂತಿಮವಾಗಿ 5ಲಕ್ಷ 21 ಸಾವಿರಕ್ಕೆ ಅದೇ ಗ್ರಾಮ ರಾಮ್ ಚರಣ್ ಎಂಬುವವರು ತಮ್ಮದಾಗಿಸಿಕೊಂಡಿದ್ದಾರೆ.
ಈ ವೇಳೆಯಲ್ಲಿ ಬಿಇಒ ಮುನಿಲಕ್ಷ್ಮಯ್ಯ, ಎಸ್ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ದೈಹಿಕ ಪರಿವೀಕ್ಷಕ ವೆಂಕಟಸ್ವಾಮಿ, ಇಸಿಒ ಹನುಮೇಗೌಡ, ಬಿಐಇಆರ್ಪಿ ಜಿ.ವಿ.ಚಂದ್ರಪ್ಪ, ಗ್ರಾ.ಪಂ ಸದಸ್ಯರಾದ ಗೋವಿಂದರೆಡ್ಡಿ, ಗೀತಾರಾಮಚಂದ್ರ ಮುಖ್ಯ ಶಿಕ್ಷಕ ಎಂ.ಶಂಕರಪ್ಪ, ಶಿಕ್ಷಕಿ ಎ.ಎಲ್. ಪಾರ್ವತಮ್ಮ, ತೋಟದ ನಿರ್ವಹಣೆ ಮಾಲೀಕ ಎ.ಎಂ. ಮುಳಬಾಗಿಲಯ್ಯ, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ರೆಡ್ಡಿ, ವೆಂಕಟರಮಣಪ್ಪ, ಗ್ರಾಮದ ಮುಖಂಡರಾದ ವೆಂಕಟರೆಡ್ಡಿ, ಜಿ.ಶಂಕರ್, ಅಡಿಗೆ ಸಿಬ್ಬಂದಿ ಶಾರದಮ್ಮ ಇದ್ದರು.